ಗದಗ: ಅಕಾಲಿಕ ಮಳೆಯಿಂದಾಗಿ ದ್ರಾಕ್ಷಿ ಬೆಳೆ ಮಣ್ಣುಪಾಲಾದ ಘಟನೆ ಗದಗ ಜಿಲ್ಲೆಯ ಕಳಸಾಪೂರ ಗ್ರಾಮದಲ್ಲಿ ನಡೆದಿದೆ.ಸುಮಾರು 25 ಹೆಕ್ಟರ್ ನಷ್ಟು ದ್ರಾಕ್ಷಿ ಬೆಳೆ ಬೆಳೆದಿದ್ದ ಕಳಸಾಪೂರದ ರೈತ, ಬಸಯ್ಯ ಸಾಸ್ವಿಹಳ್ಳಿಮಠ. ಆದ್ರೆ ಸದ್ಯ ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಸದ್ಯ ಈ ದ್ರಾಕ್ಷಿ ಬೆಳೆಗಾರರ ಬದುಕು ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ ಅನ್ನೊ ಹಾಗಾಗಿದೆ. ಮಳೆಗೆ ಬೆಳೆ ಎಲ್ಲ ನೆಲಕಚ್ಚಿ ರೈತರು ಬದುಕು ಬೀದಿಗೆ ಬರೊ ಹಾಗಾಗಿದೆ. ಹೀಗಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮ ಜಮೀನಿಗೆ ಬಂದು ನಮ್ಮ ಪರಿಸ್ಥಿತಿ ನೋಡಲಿ ಅಂತ ಒತ್ತಾಯಿಸುತ್ತಿದ್ದಾರೆ. ಇನ್ನು ಸರ್ಕಾರ ದ್ರಾಕ್ಷಿ ಬೆಳೆಗಾರರತ್ತ ಗಮನಹರಿಸಬೇಕು ಅಂತ ಬೇಡಿಕೊಳ್ಳುತ್ತಿದ್ದಾರೆ. ಮಳೆಗೆ ಹಾನಿಯಾದ ದ್ರಾಕ್ಷಿ ಬೆಳೆಗೆ ಪರಿಹಾರ ನೀಡಿ ಅಂತ ಸರ್ಕಾರಕ್ಕೆ ಮನವಿ ಮಾಡಿಕೊಳ್ತಿದ್ದಾರೆ. ಪರಿಹಾರ ಕೊಡಿ ಇಲ್ಲ ವಿಷ ಕೊಡಿ ಅಂತ ಸರ್ಕಾರದತ್ತ ಮುಖ ಮಾಡಿ ಕುಳಿತಿದಿದಾರೆ ದ್ರಾಕ್ಷಿ ಬೆಳೆಗಾರರು.
PublicNext
27/11/2021 10:34 pm