ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆ ಜಿಲ್ಲೆಯ ಹಿರಿಯೂರು ತಾಲೂಕಿನ ಈಶ್ವರಗೆರೆ ಗ್ರಾಮದ ರೈತ ಕುಬೇರ ಎಂಬುವವರು ಸುಮಾರು 5 ಎಕರೆಯಲ್ಲಿ ಕಷ್ಟಪಟ್ಟು ಈರುಳ್ಳಿ ಬೆಳೆ ಬೆಳಿದಿದ್ದರು. ಆದರೆ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಈರುಳ್ಳಿ ಪಾಕೇಟ್ ನಲ್ಲೇ ಕೊಳೆತು ಹಾಳಾಗಿದ್ದು, ಈರುಳ್ಳಿಯನ್ನು ಕೆರೆಗೆ ಸುರಿದಂತ ಘಟನೆ ನಡೆದಿದೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ರೈತ ಕುಬೇರ ಸುಮಾರು 6 ಕೆಜಿ ಈರುಳ್ಳಿ ಬೀಜವನ್ನು ಹಾಕಿದ್ದರು. ಈರುಳ್ಳಿ ಬೆಳೆಗಾಗಿ ಸಾವಿರಾರು ಖರ್ಚು ಮಾಡಿ ಲಾಭದ ನಿರೀಕ್ಷೆಯಲ್ಲಿದ್ದನು. ಬೆಳೆ ಚೆನ್ನಾಗಿ ಇಳುವರಿ ಬರಲೆಂದು ಗುಣಮಟ್ಟದ ಔಷಧಿ, ಗೊಬ್ಬರ ಹಾಕಿದ್ದರು. ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಕ್ಕೆ ರೈತನಿಗೆ ಈರುಳ್ಳಿ ಬೆಳೆಯು ಚೆನ್ನಾಗಿ ಬಂದಿತ್ತು. ಫಸಲನ್ನು ಕೊಯ್ದು, ಮೂಟೆ ಕೂಡ ಮಾಡಿದ್ದರು. ಆದರೆ ಹಸಿಯಾದ ಈರುಳ್ಳಿ ಒಂದೆರಡು ದಿನಗಳು ಒಣಗಲಿ ಎಂಬುದಾಗಿ ಪಾಕೇಟ್ ಮಾಡಿ ಇಟ್ಟಿದ್ದರು. ಇಟ್ಟಿದ್ದಂತ ಜಾಗದಲ್ಲಿಯೇ ವಾತಾವರಣದ ಪರಿಣಾಮವೋ ಅಥವಾ ಕಳಪೆ ಬೀಜದ ಎಫೆಕ್ಟೋ ಎನ್ನುವಂತೆ 176 ಚೀಲ ಈರುಳ್ಳಿ ಕೊಳೆತಂತೆ ಆಗಿದೆ. ಇದರಿಂದಾಗಿ ಮಾರಾಟವಾಗದೇ.. ಕೈಗೆ ಬಂದ ಬೆಳೆಯು ಸಿಗದೇ ಕೆರೆಗೆ ಸುರಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ..
PublicNext
21/09/2021 10:25 pm