ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಬಿಟ್ಟೆನೆಂದರೇ ಬಿಡದು ಹುಳುಗಳ ಕಾಟ: ಶಂಕು ಹುಳುವಿನ ಕಾಟಕ್ಕೆ ಶಾಕ್ ಆಗಿರುವ ಗ್ರಾಮಸ್ಥರು...!

ಗದಗ: ಆ ಗ್ರಾಮದ ಜನ ತಾವಾಯಿತು, ತಮ್ಮ ಬದುಕಾಯಿತು ಅಂತ ಜೀವನ ನಡೆಸ್ತಿದಾರೆ. ರೈತರೂ ಸಹ ಈ ಸಲವಾದರೂ ಒಳ್ಳೆಯ ಬೆಳೆ ತೆಗೆದು ಫಸಲು ಕಾಣೋಣ ಅಂತಿದಾರೆ. ಆದರೆ ಇದ್ಯಾವದಕ್ಕೂ ಆ ಕ್ರಿಮಿಗಳ ಸಮೂಹ ಬಿಡ್ತಿಲ್ಲ. ಹೀಗಾಗಿ ನೆಮ್ಮದಿ ಬದುಕು ಸಾಗಿಸ್ತಿದ್ದ ಆ ಗ್ರಾಮಸ್ಥರಿಗೆ ದೊಡ್ಡತಲೆನೋವಾಗಿದೆ. ಕುಂತರೂ ಅದರದೇ ಕಾಟ, ಮಲಗಿದರೂ ಅದರ ಕಾಟ, ಇಡೀ ಗ್ರಾಮಕ್ಕೆ ಅದರ ಕಾಟ ವೀಪರೀತವಾಗಿದೆ. ಹಾಗಾದ್ರೆ ಏನದು ಅಂತೀರಾ..ಇಲ್ಲಿದೆ ನೋಡಿ..

ಆಮೆಯಂತೆ ನಿಧಾನವಾಗಿ ಸಾಗುತ್ತಿರುವ ಶಂಕದ ಹುಳು..! ಹತ್ತಿರ ಹೋದ್ರೆ ಸಾಕು ರಕ್ಷಾಕವಚದೊಳಗೆ ಬಚ್ಚಿಟ್ಟುಕೊಳ್ಳೋ ಐನಾತಿ ಕ್ರಿಮಿ.. ಹೌದು.. ಮಾಧ್ಯಮದವರಿಗೆ ಬೇರೆ ಏನೂ ಸುದ್ದಿ ಸಿಕ್ಕಿಲ್ವಾ..ಪಾಪ ಈ ಹುಳುವನ್ನು ತೋರಿಸ್ತಿದಾರೆ ಅಂತ ನೀವ ಅನ್ಕೊಂಡಿರಬಹುದು. ಹಾಗೇನಾದ್ರೂ ಅನ್ಕೊಂಡಿದ್ರೆ ದಯವಿಟ್ಟು ಒಂದು ಸಾರಿ ಈ ಗ್ರಾಮಕ್ಕೆ ನೀವು ಭೇಟಿ ಕೂಡಲೇ ಬೇಕು. ಆಗ ಮಾತ್ರ ಈ ಶಂಕುಹುಳುಗಳ ಅವಾಂತರ ನಿಮಗೆ ಗೊತ್ತಾಗುತ್ತದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಎತ್ತಿನಹಳ್ಳಿ ಗ್ರಾಮದಲ್ಲಿ ಈ ಶಂಕುಹುಳುಗಳ ಕಾಟ ಮಿತಿಮೀರಿಹೋಗಿದೆ. ಗ್ರಾಮದ ಪ್ರತಿ ಮನೆ ಗೋಡೆ, ಹಿತ್ತಲ, ನೀರಿನ ಟ್ಯಾಂಕ್, ಹೀಗೆ ಗ್ರಾಮದ ತುಂಬೆಲ್ಲ ಪ್ರತಿ ಹೆಜ್ಜೆ ಹೆಜ್ಜೆಗೂ ಶಂಕುಹುಳುಗಳ ಕಾಟ ಹೆಚ್ಚಾಗಿದೆ. ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ಅಲ್ಲೊಂದು ಇಲ್ಲೊಂದು ಅಂತ ಕಾಣಿಸಿಕೊಳ್ತಿದ್ದ ಈ ಹುಳುಗಳು ಈ ವರ್ಷ ಗ್ರಾಮಸ್ಥರ ನೆಮ್ಮದಿ ಕೆಡಿಸುವಷ್ಟರ ಮಟ್ಟಿಗೆ ಹೆಚ್ಚಿಗೆ ಆಗಿವೆ. ಮೋಡ ಕವಿದ ವಾತಾವರಣ ಇದ್ದಾಗ ರಾಜಾರೋಷವಾಗಿ ನುಗ್ಗೋ ಇವುಗಳು ಸ್ಬಲ್ಪ ಬಿಸಿಲು ಕಾಣಿಸಿಕೊಂಡ್ರೂ ಸಾಕು ಪೊದೆ ಸೇರುತ್ತವೆ. ಪಕ್ಕದ ಯಾವ ಊರಲ್ಲಿಯೂ ಇರದ ಇಷ್ಟು ಸಂಖ್ಯೆಯ ಹುಳುಗಳು ನಮ್ಮೂರಲ್ಲಿ ಮಾತ್ರ ಯಾಕಿಷ್ಟು ಅಂತ ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದೆ.

ಇದಷ್ಟೇ ಅಲ್ಲದೇ ಹುಳುಗಳು ಗ್ರಾಮದ ಸುತ್ತಲೂ ಇರುವ ಜಮೀನುಗಳಿಗೂ ಎಂಟ್ರಿ ಕೊಟ್ಟಿವೆ. ರಾತ್ರಿ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜಮೀನುಗಳಿಗೆ ಎಂಟ್ರಿ ಕೊಡೋ ಈ ಶಂಕುಸೈನ್ಯ ಆಗತಾನೆ ಮೊಳಕೆ ಒಡೆದ ಬೆಳೆಗಳನ್ನೆಲ್ಲ ತಿಂದು ಹಾಕ್ತಿವೆ. ಯಾವ ಕ್ರಿಮಿನಾಶಕ ಸಿಂಪಡಣೆ ಮಾಡಿದರೂ ಇವುಗಳ‌‌ ಕಾಟ ಮಾತ್ರ ನಿಂತಿಲ್ಲ. ರೈತರು ಬೆಳೆದ ಹತ್ತಿ, ಶೇಂಗಾ, ಹೆಸರು, ಕಡಲೆ ಸೇರಿದಂತೆ ಎಲ್ಲಾ ಬೆಳೆಗಳನ್ನ ತಿಂದು ನಾಶ ಮಾಡ್ತಿವೆ. ಈಗಾಗಲೇ ಪ್ರವಾಹ, ಅತಿಯಾದ ಮಳೆ, ಜೊತೆಗೆ ಕೊರೊನಾ ಅಂತ ಸಮಸ್ಯೆ ಅನುಭವಿಸಿರೋ ಅನ್ನದಾತನಿಗೆ ಚೇತರಿಕೆ‌ ಕಾಣುವ ಸಮಯದಲ್ಲೇ ಶಂಕುಹುಳುಗಳ ಕಾಟ ಮತ್ತಷ್ಟು ನಷ್ಟ ಅನುಭವಿಸುವಂತೆ ಮಾಡಿದೆ. ಗ್ರಾಮಸ್ಥರೆಲ್ಲರೂ ದಿನಬೆಳಗಾದ್ರೆ ಸಾಕು ಈ ಹುಳುಗಳನ್ನು ತೆಗೆದು ಬುಟ್ಟಿಯಲ್ಲಿ ತುಂಬುವುದೇ ಕಾಯಕವಾಗಿದ್ದು ಸಂಬಂಧಪಟ್ಟ ಕೃಷಿ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಬೇಕು ಅಂತ ಆಗ್ರಹಿಸುತ್ತಿದ್ದಾರೆ.

ಒಂದು ಸಾರಿ ಮೊಟ್ಟೆ ಇಟ್ಟರೆ ಬರೊಬ್ಬರಿ 50-60 ಮೊಟ್ಟೆಗಳನ್ನು ಇಡುವ ಈ ಕ್ರಿಮಿ ಯತ್ತಿನಹಳ್ಳಿ ಗ್ರಾಮದಲ್ಲಿ ಮತ್ತಷ್ಟು ತನ್ನ ಸಂತತಿಯನ್ನು ಹೆಚ್ಚಿಸಿಕೊಂಡಿದೆ. ನೆಮ್ಮದಿಯಿಂದ ಇದ್ದ ಗ್ರಾಮದಲ್ಲಿ ರಕ್ಷಬೀಜಾಸುರರಂತೆ ಈ ಶಂಕಬೀಜಾಸುರರು ನೆಲೆಯೂರಿರೋದು ಗ್ರಾಮಸ್ಥರನ್ನು ಭಯ ಬೀಳುವಂತೆ ಮಾಡಿರೋದಂತು ಸುಳ್ಳಲ್ಲ.

Edited By : Shivu K
PublicNext

PublicNext

09/08/2021 02:00 pm

Cinque Terre

45.57 K

Cinque Terre

7