ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕ್ಕಿ ತೊಳೆದ ನೀರು ಗಿಡದ ಆರೋಗ್ಯಕ್ಕೆ ಸೂಕ್ತ

ದಕ್ಷಿಣ ಭಾರತದಲ್ಲಿ ಬಹುತೇಕ ಜನರು ನಿತ್ಯ ಊಟಕ್ಕೆ ಬಳಸುವುದು ಅನ್ನ.

ಅಕ್ಕಿಯನ್ನು ಬೇಯಿಸುವ ಮುನ್ನ 2–3 ಸಲ ನೀರಿನಲ್ಲಿ ತೊಳೆದು ಶುದ್ಧಗೊಳಿಸುವುದು ರೂಢಿ. ಆದರೆ ಈ ನೀರನ್ನು ಚೆಲ್ಲುವವರೇ ಹೆಚ್ಚು.

ಆದರೆ ಅಕ್ಕಿ ತೊಳೆದ ನೀರು ಅಥವಾ ಅಕ್ಕಚ್ಚನ್ನು ಗಿಡಗಳಿಗೆ ಹಾಕಿದರೆ ಅವು ಸೊಂಪಾಗಿ ಬೆಳೆಯುತ್ತವೆ ಜೊತೆಗೆ ಇದರಿಂದ ಕೀಟನಾಶಕ ಮತ್ತು ಗೊಬ್ಬರವನ್ನು ಕೂಡ ತಯಾರಿಸಬಹುದು.

ನೆನೆ ಹಾಕಿದ ಅಕ್ಕಿಯನ್ನಷ್ಟೇ ಬಳಸಿ ಚೆಲ್ಲುವ ನೀರನ್ನು ಗಿಡಗಳಿಗೆ ಹಾಕಬಹುದು.

ಅಕ್ಕಿ ತೊಳೆದ ನೀರಿನಲ್ಲಿ ವಿವಿಧ ಬಗೆಯ ಪೋಷಕಾಂಶಗಳಿವೆ.

ಗಿಡಗಳ ಬೆಳವಣಿಗೆಗೆ ಇವು ಪೂರಕ. ಇದರಲ್ಲಿರುವ ಪ್ರೋಟಿನ್, ನಾರಿನಾಂಶ, ಅಮಿನೊ ಆಮ್ಲಗಳು, ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣ, ಸತು ಮೊದಲಾದ ಅಂಶಗಳು ತರಕಾರಿ ಗಿಡಗಳಿಗೆ, ಔಷಧಿ ಗಿಡಗಳಿಗೆ, ಹಾಗೆಯೇ ಮನೆಯ ಆಲಂಕಾರಿಕ ಗಿಡಗಳಿಗೆ ಬಳಸಬಹುದು.

ಇದರಲ್ಲಿ ಹಲವು ಬಗೆಯ ವಿಟಮಿನ್ ಗಳು, ಖನಿಜಾಂಶಗಳಿದ್ದು, ಇವು ಬೇರಿಗೆ ಸಾಕಷ್ಟು ಪೌಷ್ಟಿಕಾಂಶ ಒದಗಿಸುತ್ತವೆ.

Edited By : Nirmala Aralikatti
PublicNext

PublicNext

01/12/2020 03:46 pm

Cinque Terre

16.12 K

Cinque Terre

0