ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿಯಲ್ಲಿ ಮತ್ತೊಂದು ಭೀಕರ ಕಾರು ಅಪಘಾತ- ವ್ಯಕ್ತಿ ಸಾವು

ಅಥಣಿ: ಶಾಲಾ ಬಸ್ ಅಪಘಾತವಾಗಿ ಇಬ್ಬರು ಚಾಲಕರು ಮೃತಪಟ್ಟ ಘಟನೆ ಬೆನ್ನಲ್ಲೇ ಅಥಣಿ ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಪಕ್ಕದ ಆಲದ ಮರ ಹತ್ತಿರ ಭಾನುವಾರ ಬೆಳಿಗ್ಗೆ ಭೀಕರ ಕಾರು ಅಪಘಾತ ಸಂಭವಿಸಿದೆ.

ಜಮಖಂಡಿ ತಾಲೂಕಿನ ತಮದಡ್ಡಿ ಗ್ರಾಮದ ಸುರೇಂದ್ರ ಮಲ್ಲಣ್ಣವರ (60) ವ್ಯಕ್ತಿ ಅಥಣಿ ತಾಲೂಕಿನ ಐನಾಪುರ ಗ್ರಾಮಕ್ಕೆ ಕಾಮಾಲೆ ಔಷಧ ತಗೆದುಕೊಂಡು ಬರುವಾಗ ಕೃಷ್ಣಾ ಶುಗರ್ ಪಕ್ಕ ಈ ಅವಘಡ ಸಂಭವಿಸಿದೆ. ರಸ್ತೆ ಬಿಟ್ಟು ಸುಮಾರು ಇನ್ನೂರು ಅಡಿ ಗೋವಿನ ಜೋಳದ ತೋಟದಲ್ಲಿ ಕಾರು ಪಲ್ಟಿಯಾಗಿ ಬಿದ್ದಿದೆ. ಏರ್‌ಬ್ಯಾಗ್ ಬಿಚ್ಚಿದ್ದರು ಚಾಲಕ ಸಾವನ್ನಪ್ಪಿದ್ದು ದುರದೃಷ್ಟಕರ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

ಪಬ್ಲಿಕ್ ನೆಕ್ಸ್ಟ್ ವರದಿ : ಸಂತೋಷ ಬಡಕಂಬಿ

Edited By : Manjunath H D
PublicNext

PublicNext

21/08/2022 02:22 pm

Cinque Terre

52.01 K

Cinque Terre

2

ಸಂಬಂಧಿತ ಸುದ್ದಿ