ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಚಕ್ಕಡಿಗೆ ಟಿಪ್ಪರ್ ಡಿಕ್ಕಿ: ಗ್ರಾಮಸ್ಥರ ಆಕ್ರೋಶ!

ಗದಗ: ಹೊಲಕ್ಕೆ ಹೊರಟ್ಟಿದ್ದ ಚಕ್ಕಡಿಗೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಚಕ್ಕಡಿಯಲ್ಲಿದ್ದವರಿಗೆ ಗಾಯಗಳಾಗಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದಲ್ಲಿ ಸಂಭವಿಸಿದೆ.

ವೇಗವಾಗಿ ಬರುತ್ತಿದ್ದ ಟಿಪ್ಪರ್ ಚಕ್ಕಡಿಗೆ ಡಿಕ್ಕಿ ಹೊಡೆದಿದೆ. ಆಗ ಚಕ್ಕಡಿಯಲ್ಲಿದ್ದವರು ಕೆಳಗೆ ಬಿದ್ದು, ಕೈಕಾಲುಗಳಿಗೆ ಪೆಟ್ಟಾಗಿದೆ. ಇದರಿಂದಾಗಿ ರೊಚ್ಚಿಗೆದ್ದ ಗ್ರಾಮಸ್ಥರು ಟಿಪ್ಪರನ್ನು ತಡೆದು ಚಾಲಕನನ್ನು ತರಾಟೆಗೆ ತೆಗೆದುಕೊಂಡರು.

ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಇದೇ ರೀತಿ ವೇಗವಾಗಿ ಟಿಪ್ಪರಗಳು ಚಲುಸುತ್ತವೆ. ಗ್ರಾಮದಲ್ಲೂ ಸಹ ಚಾಲಕರು ವಾಹನಗಳನ್ನು ಬೇಕಾಬಿಟ್ಟಿಯಾಗಿ ಓಡಿಸುತ್ತಾರೆ. ಇದರಿಂದಾಗಿ ‌ರಸ್ತೆ ಅಪಘಾತಗಳು ಸಾಮಾನ್ಯಾವಾಗಿದೆ ಎಂದು ಹೇಳಿದರು.

ಮಕ್ಕಳು ರಸ್ತೆಯಲ್ಲಿ ಹೋಗುವಾಗಲೂ ಚಾಲಕರು ನಿರ್ಲಕ್ಷ್ಯ ತೋರಿತ್ತಿದ್ದಾರೆ ಎಂದು ರೈತ ಮುಖಂಡ ಷಣ್ಮುಖಿ ಆರೋಪಿಸಿದರು.

ರಸ್ತೆ ಬಂದ್ ಮಾಡಿದ್ದರಿಂದ ವಾಹನಗಳ ದಟ್ಟಣೆ ಉಂಟಾಗಿತ್ತು. ವಿಷಯ ತಿಳಿಯಿತ್ತಲೇ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ ಪಿಎಸ್ಐ ಡಿ.ಪ್ರಕಾಶ ಅವರು ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಸಂಚಾರಕ್ಕೆ ಅನೂಕುಲ‌ ಮಾಡಿಕೊಟ್ಟರು.

Edited By : Manjunath H D
PublicNext

PublicNext

30/07/2022 02:09 pm

Cinque Terre

44.08 K

Cinque Terre

0

ಸಂಬಂಧಿತ ಸುದ್ದಿ