ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ಯಾಂಕರ್ ಕಾರ್ ಮಧ್ಯೆ ಡಿಕ್ಕಿ : ಸ್ಥಳದಲ್ಲೇ ಇಬ್ಬರ ದುರ್ಮರಣ

ಕಲಬುರಗಿ : ಆಯಿಲ್ ಟ್ಯಾಂಕರ್ ಮತ್ತು ಸ್ವೀಫ್ಟ್ ಡಿಸೈರ್ ಕಾರು ಮಧ್ಯೆ ಮುಖಾಮುಖಿ ಸಂಭವಿಸಿ ಸ್ಥಳದಲ್ಲೇ ಇಬ್ಬರ ದುರ್ಮರಣವಾಗಿ ಓರ್ವನ ಸ್ಥಿತಿ ಚಿಂತಾಜನಕವಾದ ಘಟನೆ ಕಲಬುರಗಿ ಹೊರವಲಯದ ಶಹಬಾದ್ ರಸ್ತೆಯ ಶೆಟ್ಟಿ ಕಾಲೇಜು ಬಳಿ ನಡೆದಿದೆ.

ಘಟನೆಯಲ್ಲಿ ಅಮಿತ್ (21) ಮತ್ತು ಆದರ್ಶ (22) ಮೃತ ದುದೈವಿಗಳು. ಸದ್ಯ ಮಹಾಂತೇಶ್ ಎಂಬುವವನ ಸ್ಥಿತಿ ಚಿಂತಾಜನಕವಾಗಿದ್ದು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇನ್ನು ಮೃತರು ಕಲಬುರಗಿ ನಗರ ನಿವಾಸಿಗಳು ಎಂದು ತಿಳಿದು ಬಂದಿದೆ.

ಕಲಬುರಗಿಯಿಂದ ಶಹಬಾದ್ ನತ್ತ ಹೊರಟಿದ್ದ ಸ್ವಿಫ್ಟ್ ಕಾರಿಗೆ ಶಹಬಾದ್ನಿಂದ ಕಲಬುರಗಿ ನಗರದ ಕಡೆ ಬರುತ್ತಿದ್ದ ಆಯಿಲ್ ಟ್ಯಾಂಕರ್ ನಡುವೆ ಡಿಕ್ಕಿಯಾದ ರಭಸಕ್ಕೆ ಸ್ವಿಫ್ಟ್ ಡಿಸೈರ್ ಕಾರು ನುಜ್ಜುಗುಜ್ಜಾಗಿದೆ.

ಈ ಕುರಿತು ಕಲಬುರಗಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು

Edited By : Somashekar
PublicNext

PublicNext

03/07/2022 10:01 pm

Cinque Terre

142.34 K

Cinque Terre

3

ಸಂಬಂಧಿತ ಸುದ್ದಿ