ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೈರ್ ಸ್ಫೋಟದಿಂದ ಟ್ರ್ಯಾಕ್ಟರ್‌ಗೆ ಡಿಕ್ಕಿಯಾದ ಲಾರಿ: ನಾಲ್ವರು ಸಾವು, 14 ಮಂದಿಗೆ ಗಾಯ

ಮೊರಾದಾಬಾದ್: ಟ್ರಕ್ ಟೈರ್ ಸ್ಫೋಟಗೊಂಡ ಪರಿಣಾಮ ಟ್ರಕ್ ನಿಯಂತ್ರಣ ತಪ್ಪಿ ಜನರಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದೆ. ಇದರಿಂದಾಗಿ ನಾಲ್ವರು ಸಾವನ್ನಪ್ಪಿದ್ದು, ಸುಮಾರು 14 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ಠಾಕುರ್ದ್ವಾರ-ಮೊರಾದಾಬಾದ್ ಹೆದ್ದಾರಿಯಲ್ಲಿ ನಡೆದಿದೆ.

ಟ್ರ್ಯಾಕ್ಟರ್ ಟ್ರಾಲಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವಿಗೀಡಾಗಿದ್ದಾರೆ. ಈ ವೇಳೆ 14 ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮೊರಾದಾಬಾದ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಶೈಲೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ. ಇವರೆಲ್ಲರೂ ಗುಜರಾತ್‌ನ ಅಮ್ರೋಹಾ ಬಳಿಯ ‘ಕಾಲು ಶಹೀದ್ ದರ್ಗಾ’ದಿಂದ ಟ್ರ್ಯಾಕ್ಟರ್-ಟ್ರಾಲಿಯಲ್ಲಿ ಹಿಂತಿರುಗುತ್ತಿದ್ದರು. ಠಾಕೂರ್‌ದ್ವಾರ-ಮೊರಾದಾಬಾದ್ ಹೆದ್ದಾರಿಯಲ್ಲಿ ಮುಂಭಾಗದಿಂದ ಬರುತ್ತಿದ್ದ ಟ್ರಕ್‌ನ ಟೈರ್ ಸ್ಫೋಟಗೊಂಡ ಪರಿಣಾಮ ಟ್ರಕ್ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಆಮ್ನಾ ಖಾತೂನ್ (60), ಮೊಹಮ್ಮದ್ ಆರಿಫ್ ಮತ್ತು ಮೊಹಮ್ಮದ್ ರಿಹಾನ್ (2) ಎಂದು ಗುರುತಿಸಲಾಗಿದೆ. ಈ ಮೂವರೂ ಅಮ್ರೋಹಾ ಜಿಲ್ಲೆಯ ಡಿಡೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ಯೋನಾಲಿ ಗ್ರಾಮದ ನಿವಾಸಿಗಳು. ಇನ್ನೂ ನಾಲ್ಕನೇ ಮೃತರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Edited By : Nagaraj Tulugeri
PublicNext

PublicNext

03/06/2022 12:26 pm

Cinque Terre

63.67 K

Cinque Terre

0

ಸಂಬಂಧಿತ ಸುದ್ದಿ