ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರಕ್ ಅಪಘಾತ: ಕಡಲೆ ಹಿಟ್ಟಿನ ಮೂಟೆಗಳನ್ನೆ ಕದ್ದು ಓಡಿದ ಬಿಲಾಸಪುರ ಜನ !

ಛತೀಸಗಢ್:ಹಳ್ಳಿಗಳಲ್ಲಿ ಶರಹಗಳಲ್ಲಿ ಹಾದು ಹೋಗುವ ರಸ್ತೆಗಳಲ್ಲಿ ಅಪಘಾತ ಆದ್ರೆ ಮುಗೀತು. ಅಲ್ಲಿ ಸುತ್ತ-ಮುತ್ತಲಿನ ಜನಕ್ಕೆ ಅಂದು ಅದು ಅತಿ ದೊಡ್ಡ ಸುದ್ದಿ ಆಗಿ ಬಿಡುತ್ತದೆ. ಅದರಂತೆ ಹಾಲಿನ ವಾಹನವೋ ಡೀಸೆಲ್ ಟ್ಯಾಂಕರೋ ಪಲ್ಟಿ ಹೊಡೆದು ಬಿದ್ದರೆ ಮುಗಿದೇ ಹೋಯಿತು. ಅಂದು ಊರ ಜನಕ್ಕೆ ದೊಡ್ಡ ಹಬ್ಬವೇ ಬಿಡಿ. ಅದೇ ರೀತಿಯ ಒಂದು ಘಟನೆ ಛತೀಸಗಢ್ ನಲ್ಲಿ ನಡೆದಿದೆ.

ಹೌದು. ಛತೀಸಗಢ್‌ನ ಬಿಲಾಸಪುರದಲ್ಲಿ ಇತ್ತೀಚಿಗೆ ಒಂದು ಕಡಲೆ ಬೇಳೆ ಮೂಟೆ ಹೊತ್ತು ಒಂದು ಟ್ರಕ್ ಸಾಗುತ್ತಿತ್ತು. ಆದರೆ, ಇದೇ ಟ್ರಕ್‌ ಗೆ ಅಪಘಾತ ಆಗಿದೆ. ಅಷ್ಟೇ ನೋಡಿ.

ಊರ ಜನರಿಗೆ ವಿಷಯ ತಿಳಿದಿದೆ. ಟ್ರಕ್ ಅಪಘಾತ ನೋಡಲು ಬಂದ ಜನ ಅದರಲ್ಲಿದ್ದ ಕಡೆ ಮೂಟೆಗಳನ್ನ ಹೊತ್ತು ಕೊಂಡು ಹೋಗಿದ್ದಾರೆ. ಟ್ರಕ್ ನಲ್ಲಿ ಡ್ರೈವರ್‌ ಗೆ ಏನಾಗಿದೆ. ಕ್ಲೀನರ್‌ ಗೆ ಏನ್ ಆಗಿದೆ ಅನ್ನೋದನ್ನೂ ನೋಡದೇ, ಮೂಟೆ ಹೊತ್ತು ಕೊಂಡು ಹೋಗಿರೋ ದೃಶ್ಯ ಈಗ ಅತಿ ಹೆಚ್ಚು ವೈರಲ್ ಆಗುತ್ತಿದೆ.

Edited By :
PublicNext

PublicNext

31/05/2022 10:18 am

Cinque Terre

84.11 K

Cinque Terre

6