ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾರದಮುನಿ ರಥೋತ್ಸವ : ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

ಹರಪನಹಳ್ಳಿ: ಎಲ್ಲರೂ ಸಂಭ್ರಮದಿಂದ ತೇರಿನತ್ತ ನೋಡುತ್ತಿರುವಾಗಲೇ ಅವಘಡವೊಂದು ನಡೆದು ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನಡೆದಿದೆ. ಶ್ರೀ ನಾರದಮುನಿ ರಥೋತ್ಸವ ಸಂದರ್ಭದಲ್ಲಿ ಸುರೇಶ ಬಿ.(42) ಸಾವನ್ನಪ್ಪಿದ ಭಕ್ತ. ಸುರೇಶ ಅವರು ಕುಟುಂಬ ಸಮೇತ ಇಂದು ನಾರದಮುನಿ ರಥೋತ್ಸವಕ್ಕೆ ತಾಲೂಕಿನ ಚಿಗಟೇರಿ ಗ್ರಾಮಕ್ಕೆ ಬಂದಿದ್ದರು.

ರಥ ಸಾಗಿ ಕೇವಲ 5-6 ಅಡಿ ಚಲಿಸಿದಾಗ ಬಾಳೆ ಹಣ್ಣಿನ ಸಿಪ್ಪೆ ತುಳಿದು ಜಾರಿದ ಸುರೇಶ ರಥದ ಗಾಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ತಂದೆಯ ಜೊತೆ ಮಗನು ಸಹ ಕೆಳಕ್ಕೆ ಬಿದ್ದಾಗ ತಕ್ಷಣ ಪೋಲೀಸರು ಹಾಗೂ ಜನರು ಮಗನನ್ನು ಮೇಲಕ್ಕೆತ್ತಿದ್ದಾರೆ ಪರಿಣಾಮ ಮಗ ಪ್ರಾಣಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಚಿಗಟೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

21/04/2022 10:53 pm

Cinque Terre

51.15 K

Cinque Terre

1