ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮುಟ್ಟಾಲೆ ಧರಿಸಿಕೊಂಡೇ 'ಪದ್ಮಶ್ರೀ' ಪ್ರಶಸ್ತಿ ಸ್ವೀಕರಿಸಿದ ಅಮೈ ಮಹಾಲಿಂಗ ನಾಯ್ಕ್

ಮಂಗಳೂರು: ಕರಾವಳಿಯ ಕೃಷಿ ಸಂಸ್ಕೃತಿಯ ಪ್ರತೀಕವಾದ ಮುಟ್ಟಾಲೆಯನ್ನು ಧರಿಸಿಕೊಂಡೇ 'ಆಧುನಿಕ ಭಗೀರಥ' ಅಮೈ ಮಹಾಲಿಂಗ ನಾಯ್ಕ್ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ಎಲ್ಲರ ಗಮನ ಸೆಳೆದರು.

ಸುರಂಗ ತೋಡಿ ನೀರು ಹುಡುಕಾಟ ನಡೆಸಿ ಬೋಳುಗುಡ್ಡೆಯನ್ನು ಕೃಷಿ ಸಾಧನೆಗೈದ 'ಆಧುನಿಕ ಭಗೀರಥ' ಅಮೈ ಮಹಾಲಿಂಗ ನಾಯ್ಕ್ ಅವರು ನಿನ್ನೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಮುಟ್ಟಾಲೆ ಧರಿಸಿಕೊಂಡೇ ಪದ್ಮಶ್ರೀ ಪ್ರಶಸ್ತಿ ಸ್ವೀಕರಿದರು. ಪ್ರಶಸ್ತಿ ಸ್ವೀಕರಿಸಲು ಮಹಾಲಿಂಗ ನಾಯ್ಕ್ ತಮ್ಮ ಮೊಮ್ಮಗನೊಂದಿಗೆ ದೆಹಲಿಯತ್ತ ಪ್ರಯಾಣ ಬೆಳೆಸಿದ್ದರು. ದೆಹಲಿ ಪ್ರಯಾಣದ ಕ್ಯಾಬ್ ಹಾಗೂ ವಿಮಾನ ಯಾನ ದರವನ್ನು ಸರಕಾರವೇ ಭರಿಸಿತ್ತು. ರವಿವಾರ ಬೆಳಗ್ಗೆ 11.15ಕ್ಕೆ ವಿಮಾನ ಏರಿರುವ ಮಹಾಲಿಂಗ ನಾಯ್ಕ್ ಅವರು, ಬೆಂಗಳೂರು ಮೂಲಕ ದಿಲ್ಲಿಗೆ ಪ್ರಯಾಣ ಬೆಳೆಸಿದ್ದರು. ಸಂಜೆ 6ಕ್ಕೆ ದಿಲ್ಲಿ ತಲುಪಿದ ಅವರು ಅಶೋಕ ಹೊಟೇಲ್ ನಲ್ಲಿ ತಂಗಿದ್ದರು.

ಪ್ರಶಸ್ತಿ ಸ್ವೀಕರಿಸಿದ ಮಹಾಲಿಂಗ ನಾಯ್ಕ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, 'ಪ್ರಧಾನಿ ಮೋದಿಯವರು ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗೆ ಮಾತನಾಡಿದ ಖುಷಿ ಇದೆ. ನನಗೆ ಹಿಂದಿ ಭಾಷೆ ಗೊತ್ತಿಲ್ಲ.‌ ಆದ್ದರಿಂದ ನಾನು ಅವರಲ್ಲಿ ಮರಾಠಿ ಭಾಷೆಯಲ್ಲಿ ಮಾತನಾಡಿದ್ದೆ. ಅವರ ಪ್ರತಿಕ್ರಿಯೆಯ ಮಾತುಗಳನ್ನು ಭಾವದಿಂದಲೇ ಅರ್ಥೈಸಿಕೊಂಡೆ. ಈ ಬಗ್ಗೆ ನನಗೆ ಅತೀವ ಸಂತೋಷವಿದೆ. ಇಂದು ದಿಲ್ಲಿಯಲ್ಲಿ ವಿವಿಧ ಪ್ರವಾಸಿತಾಣಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ. ಸಂಜೆ ವೇಳೆಗೆ ತವರಿಗೆ ಹೊರಡಲು ವಿಮಾನದ ವ್ಯವಸ್ಥೆಯನ್ನು ಸರಕಾರ ಮಾಡಿದ್ದು, ಮಾ.30ರಂದು ಮಂಗಳೂರು ತಲುಪಲಿದ್ದೇನೆ ಎಂದರು.

Edited By : Vijay Kumar
PublicNext

PublicNext

29/03/2022 11:01 am

Cinque Terre

27.2 K

Cinque Terre

0

ಸಂಬಂಧಿತ ಸುದ್ದಿ