ಚಿತ್ತೂರು: ಟ್ರಿಪಲ್ ಆರ್ ಸಿನಿಮಾ ರಿಲೀಸ್ ಏನೋ ಆಗಿದೆ. ಅಭಿಮಾನಿಗಳೂ ಮುಗಿ ಬಿದ್ದು ಚಿತ್ರ ನೋಡ್ತಿದ್ದಾರೆ. ಆದರೆ ಚಿತ್ರ ನೋಡುವ ಭರದಲ್ಲಿಯೇ ಕೆಲ ಅಭಿಮಾನಿಗಳು ಸಾವನೊಪ್ಪಿದ್ದು ಮಾತ್ರ ದುರಂತ ನೋಡಿ. ಹೇಗೆ ಅಂತಿರೋ ಬನ್ನಿ, ಹೇಳ್ತಿವಿ.
ಚಿತ್ತೂರು ಜಿಲ್ಲೆಯ ಹಳ್ಳಿಯೊಂದರ ಮೂವರು ಯುವಕರು ಮೃತಪಟ್ಟಿದ್ದಾರೆ. ಇವರ ಸಾವಿಗೆ ನೇರ ಕಾರಣ ಸಿನಿಮಾನೇ ಅಂತ ಹೇಳೋಕೆ ಆಗೋದಿಲ್ಲ. ಕಾರಣ, ಸಿನಿಮಾ ನೋಡುವ ಆಸೆಯಿಂದಲೇ ದೂರದ ಹಳ್ಳಿಯಿಂದ ಟ್ರಿಪಲ್ ಆರ್ ರಿಲೀಸ್ ಆದ ಥಿಯೇಟರ್ ಗೆ ಬಂದಿದ್ದಾರೆ.
ಆದರೆ, ಇವರಿಗೆ ಟಿಕೆಟ್ ಸಿಕ್ಕೇಯಿಲ್ಲ. ಟಿಕೆಟ್ ಗಾಗಿ ಪರದಾಡಿ ಬೇಸರಪಟ್ಟಿದ್ದಾರೆ. ಅದೇ ಬೇಸರದಲ್ಲಿಯೇ ಊರು ಕಡೆಗೆ ತಡರಾತ್ರಿ ಹೊರಟ್ಟಿದ್ದಾರೆ. ಇವರ ದುರಾದೃಷ್ಟಕ್ಕೆ ಮೂವರು ಸವಾರಿ ಮಾಡಿದ್ದ ಬೈಕ್ ಅಪಘಾತ ಆಗಿದೆ. ಇದರಿಂದ ಮೂವರು ಸ್ಥಳದಲ್ಲಿಯೇ ಸತ್ತು ಹೋಗಿದ್ದಾರೆ.
PublicNext
26/03/2022 09:55 pm