ಚಿಕ್ಕಬಳ್ಳಾಪುರ: ಬೆಂಗಳೂರು ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ 44 ರ ಚಿಕ್ಕಬಳ್ಳಾಪುರ ಜಿಲ್ಲೆ ಪೆರೇಸಂದ್ರ ಸಮೀಪದ ಆರೂರು ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸಾವನ್ನಪ್ಪಿದೆ. ಆರೂರು ಗ್ರಾಮ ಸಮೀಪ ನಿರ್ಮಾಣ ಹಂತದ ನೂತನ ಮೆಡಿಕಲ್ ಕಾಲೇಜು ಬಳಿ ಈ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 44 ಅನ್ನು ದಾಟುವ ವೇಳೆ ಚಿರತೆಗೆ ವಾಹನ ಡಿಕ್ಕಿಯಾಗಿ ರಸ್ತೆ ಬದಿ ಚಿರತೆ ಸಾವನ್ನಪ್ಪಿ ಬಿದ್ದಿತ್ತು. ಅಪಘಾತವಾಗಿ ಬಿದ್ದ ಚಿರತೆ ಕಂಡು ವಾಹನ ಸವಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಬರುವಷ್ಟರಲ್ಲಿ ಮನುಷ್ಯನ ಕುಚೇಷ್ಟೇ ಮುಂದುವರೆದಿದೆ. ಸತ್ತ ಚಿರತೆಯೊಂದಿಗೆ ಸೆಲ್ಫೀಗೀಳಿಗೆ ಬಿದ್ದು ಮನುಷ್ಯ ಮಾನವೀಯತೆ ಮರೆತಿದ್ದಾನೆ.
ಮೃತ ಚಿರತೆಯ ದೇಹವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
PublicNext
11/03/2022 11:02 am