ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಪೊಲೀಸ್‌ ಕಣ್ತಪ್ಪಿಸಲು ಹೋಗಿ ವಿದ್ಯಾರ್ಥಿಗಳಿಂದ ಅಪಘಾತ; ವ್ಯಕ್ತಿಯ ಎರಡೂ ಕಾಲು ಮುರಿತ

ವರದಿ: ಹರೀಶ್ ಗೌತಮನಂದ

ಆನೇಕಲ್:‌ ರಸ್ತೆಯಲ್ಲಿ ನಿಂತಿದ್ದ ಪೊಲೀಸರ ಕಣ್ಣು ತಪ್ಪಿಸಲು ಹೋಗಿ, ಬೈಕ್‌ ಸವಾರರಾದ ವಿದ್ಯಾರ್ಥಿಗಳು ಇನ್ನೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಎರಡೂ ಕಾಲು ಮುರಿದುಕೊಂಡಿರುವ ಘಟನೆ ಸೂರ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮರಸೂರು ಗೇಟ್ ಬಳಿ ಸಂಭವಿಸಿದೆ. ಬೈಕ್ ಸವಾರ ರಾಮ ಆಂಜನೇಯ ಅಪಘಾತದಲ್ಲಿ ಕಾಲು ಮುರಿದುಕೊಂಡವರು.

ಎಂದಿನಂತೆ ಭಾನುವಾರ ಡ್ರಿಂಕ್ ಆಂಡ್ ಡ್ರೈವ್ ಕೇಸ್ ಪತ್ತೆ ಹಚ್ಚಲು ಸೂರ್ಯ ನಗರ ಪೊಲೀಸರು ತಪಾಸಣೆ ಮಾಡ್ತಿದ್ರು. ರಸ್ತೆ ಬದಿ ಪೊಲೀಸರು ಪರಿಶೀಲನೆ ಮಾಡುತ್ತಿದ್ದ ವೇಳೆ ಆನೇಕಲ್ ನಿಂದ ಚಂದಾಪುರ ಕಡೆಗೆ ಅಲೆಯನ್ಸ್ ಕಾಲೇಜಿನ ವಿದ್ಯಾರ್ಥಿಗಳು ಬೈಕ್‌ ನಲ್ಲಿ ಬರುತ್ತಿದ್ದರು. ಪೊಲೀಸರನ್ನು ರಸ್ತೆ ಬದಿ ನೋಡಿ ಅವರ ಕಣ್ತಪ್ಪಿಸಲು ಅತಿ ವೇಗವಾಗಿ ಚಲಾಯಿಸಿ ಮುಂದೆ ಬರುತ್ತಿದ್ದಾಗ ಬೈಕ್ ಸವಾರ ರಾಮ ಆಂಜನೇಯ ಎಂಬವರಿಗೆ ಡಿಕ್ಕಿ ಹೊಡೆದಿದ್ದಾರೆ.

ಈ ಅಪಘಾತದಿಂದ ರಾಮ ಆಂಜನೇಯರ ಎರಡೂ ಕಾಲು ಮುರಿದಿದೆ. ಕೂಡಲೇ ಗಾಯಾಳುವನ್ನು ಸ್ಥಳೀಯ ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಯಿತು. ಅಪಘಾತ ಬಗ್ಗೆ ಸೂರ್ಯನಗರ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

Edited By :
PublicNext

PublicNext

30/01/2022 07:38 pm

Cinque Terre

96.06 K

Cinque Terre

0

ಸಂಬಂಧಿತ ಸುದ್ದಿ