ಹಾವೇರಿ: ಬಸ್‌ನಿಂದ ಬಿದ್ದ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿಯ ಗಂಗೆಭಾವಿ ಕ್ರಾಸ್ ಬಳಿ ನಡೆದಿದೆ. ಶಿಗ್ಗಾವಿ ತಾಲೂಕಿನ ದುಂಡಶಿ ಗ್ರಾಮದ ವಿನಾಯಕ ಪಾಟೀಲ್ ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ.
ಶಿಗ್ಗಾವಿ ಪಟ್ಟಣದ SRJV ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅಭ್ಯಾಸ ಮಾಡುತ್ತಿದ್ದ ವಿನಾಯಕ ಕಾಲೇಜು ಮುಗಿಸಿ ಶಿಗ್ಗಾಂವಿ ಬಸ್ ನಿಲ್ದಾಣದಿಂದ ತನ್ನ ಊರಿಗೆ ತೆರಳುವಾಗ ಗಂಗಿಬಾವಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
28/12/2021 10:42 am