ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 2021ರ ಆ ದುರ್ಘಟನೆಯನ್ನು ಧಾರವಾಡ ಎಂದಿಗೂ ಮರೆಯುವುದಿಲ್ಲ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಅದು 2021ರ ಜ.15ನೇ ತಾರೀಖು. ಎಲ್ಲರೂ ನಿದ್ದೆಯಿಂದ ಎದ್ದೇಳುವಷ್ಟೊತ್ತಿಗೆ ಧಾರವಾಡ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ದುರ್ಘನೆಯೊಂದು ನಡೆದಿತ್ತು. ಆ ದುರ್ಘಟನೆ ನಡೆದು, ಬರುವ ಜನೇವರಿ ತಿಂಗಳಿಗೆ ಬರೊಬ್ಬರಿ ಒಂದು ವರ್ಷವಾಗಿದೆ. ಆದರೆ, ಆ ದುರ್ಘಟನೆ ಜನ ಮಾನಸದಲ್ಲಿ ಇನ್ನೂ ಹಚ್ಚ ಹಸಿರಾಗಿ ಉಳಿದಿದೆ.

ಅದೇನಪ್ಪಾ ಘಟನೆ ಅಂತೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್..

2021ನೇ ವರ್ಷಕ್ಕೆ ವಿದಾಯ ಹೇಳಲು ಕೆಲವು ದಿನಗಳು ಮಾತ್ರ ಬಾಕಿ ಇದೆ. ಹೊಸ ವರ್ಷವನ್ನು ಸ್ವಾಗತಿಸಲು ಜನರು ಸಿದ್ಧವಾಗುತ್ತಿದ್ದಾರೆ. 2021ರಲ್ಲಿ ನಡೆದ ಕೆಲವು ಕಹಿ ಘಟನೆಗಳು ಸದಾ ಕಾಡುತ್ತವೆ. ಅದರಲ್ಲೂ ಧಾರವಾಡದಲ್ಲಿ ನಡೆದ ಭೀಕರ ರಸ್ತೆ ಅಪಘಾತ ಇಡೀ ದೇಶದ ಗಮನಸೆಳೆದಿತ್ತು. ಸ್ವತಃ ಪ್ರಧಾನಿ ಮೋದಿ ಅವರೇ ಈ ಬಗ್ಗೆ ಟ್ವೀಟ್ ಮಾಡಿದ್ದರು.

2021ರ ಜನೇವರಿ 15ರ ಶುಕ್ರವಾರ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಇಟಿಗಟ್ಟಿ ಬಳಿ ಟೆಂಪೊ ಟ್ರಾವೆಲರ್ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ದಾವಣಗೆರೆಯಿಂದ ಗೋವಾಕ್ಕೆ ಪ್ರವಾಸಕ್ಕೆಂದು ಹೊರಟಿದ್ದ 12 ಜನ ಈ ಅಪಘಾತದಿಂದ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಮೃತಪಟ್ಟವರಲ್ಲಿ ಮಹಿಳೆಯರೇ ಹೆಚ್ಚು, ಎಲ್ಲರೂ ಸ್ನೇಹಿತೆಯರಾಗಿದ್ದು, ಸಂಕ್ರಾಂತಿ ರಜೆ ಹಿನ್ನೆಲೆಯಲ್ಲಿ ಗೋವಾ ಪ್ರವಾಸ ಕೈಗೊಂಡಿದ್ದರು. 14 ಜನರನ್ನು ಬಲಿ ಪಡೆದ ಈ ಬೈಪಾಸ್ ರಸ್ತೆ ಇಂದಿಗೂ ಬಲಿ ಬೇಡುತ್ತಲೇ ಇದೆ.

ಈ ಅಪಘಾತವಾದ ನಂತರ ಬೈಪಾಸ್ ರಸ್ತೆಯನ್ನು ಅಗಲೀಕರಣ ಮಾಡಬೇಕು ಎಂಬ ಹೋರಾಟ, ಒತ್ತಾಯ ಕೇಳಿ ಬಂದವು. ಆದರೆ, ಬೊಗಳೆದಾಸ ರಾಜಕಾರಣಿಗಳು ಮಾತ್ರ ರಸ್ತೆ ಅಗಲೀಕರಣವಾಗುತ್ತದೆ ಎಂದು ಹೋರಾಟಗಾರರ ಕಣ್ಣೊರೆಸುವ ತಂತ್ರ ಮಾಡಿದರು. ಇದೀಗ ಅಪಘಾತವಾದ ರಸ್ತೆ 2021ರ ಈ ದುರ್ಘಟನೆಯನ್ನು ಕೆದಕಿ ಕೆದಕಿ ಹೇಳುತ್ತಿದೆ.

ಈ ಅಪಘಾತದಲ್ಲಿ ಮೃತಪಟ್ಟವರು ಎಲ್ಲರೂ ಸ್ನೇಹಿತೆಯರು. ಒಟ್ಟಿಗೆ ಓದಿದ್ದ ಎಲ್ಲರೂ ಬಳಿಕ ದೂರವಾಗಿದ್ದರು. ಫೇಸ್‌ಬುಕ್ ಸಹಾಯದಿಂದ ಒಂದಾಗಿ ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿಕೊಂಡಿದ್ದರು. ದಾವಣಗೆರೆಯಲ್ಲಿ ಲೇಡಿಸ್ ಕ್ಲಬ್ ಕೂಡ ಮಾಡಿಕೊಂಡಿದ್ದರು. ಮೃತಪಟ್ಟವರಲ್ಲಿ ವೈದ್ಯೆ, ಉದ್ಯಮಿ, ಗೃಹಿಣಿಯರು ಇದ್ದರು. ಈ ಅಪಘಾತ ದೇಶದ ಗಮನಸೆಳೆದಿತ್ತು.

4 ವರ್ಷಗಳ ಅವಧಿಯಲ್ಲಿ 30 ಕಿಲೋ ಮೀಟರ್ ಉದ್ದದ ಈ ಬೈಪಾಸ್ ರಸ್ತೆಯಲ್ಲಿ 528 ಜನ ಮೃತಪಟ್ಟಿದ್ದಾರೆ, 542 ಜನ ಗಾಯಗೊಂಡಿದ್ದಾರೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಗಲೀಕರಣ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಬರುವ 2022ನೇ ವರ್ಷದಲ್ಲಾದರೂ ಸಾವಿನ ರಸ್ತೆಯಾಗಿರುವ ಈ ರಸ್ತೆ ಜನಸ್ನೇಹಿಯಾಗಿ ಪರಿವರ್ತನೆಯಾಗಲಿ.

Edited By : Manjunath H D
PublicNext

PublicNext

24/12/2021 04:11 pm

Cinque Terre

130.36 K

Cinque Terre

13