ಮೈಸೂರು: ಶಾಲಾ ಮಕ್ಕಳನ್ನು ಬಸ್ ನಿಂದ ಕೆಳಗಿಳಿಸಿ ಚಾಲಕನೂ ಶಾಲೆಗೆ ಹೋದ ಕೆಲವೇ ಸಮಯದಲ್ಲಿ ಬಸ್ ಧಗ ಧಗನೆ ಹೊತ್ತಿ ಬೆಂಕಿಗಾಹುತಿಯಾದ ಘಟನೆ ನಗರದ ಪಿರಿಯಾಪಟ್ಟಣದ ಡಿಟಿಎಂಎನ್ ಶಾಲೆಯಲ್ಲಿ ನಡೆದಿದೆ.
ಒಂದು ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಕೆಲವು ಬಸ್ ಗಳಿಗೆ ಭಾಗಶಃ ಬೆಂಕಿ ತಗುಲಿದೆ. ಬೆಂಕಿ ತಗಲುತ್ತಿದ್ದಂತೆ ಅಕ್ಕ ಪಕ್ಕ ನಿಲ್ಲಿಸಿದ್ದ ಬಸ್ ಗಳನ್ನು ತೆರವುಗೊಳಿಸಲಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ ಸಿಬ್ಬಂದಿಯು ಬೆಂಕಿನಂದಿಸುವ ಕಾರ್ಯ ಮಾಡಿದ್ದಾರೆ.
PublicNext
22/12/2021 05:13 pm