ಬೀದರ್: ಮಗನ ಮದುವೆಯ ಆಮಂತ್ರಣ ನೀಡಲು ಹೋಗಿದ್ದ ಭಾಲ್ಕಿ ಕಾಂಗ್ರೆಸ್ ಮುಖಂಡ ಸೂರ್ಯಕಾಂತ್ ಪಾಟೀಲ್ ಹಾಗೂ ಜಯಶ್ರೀ ಪಾಟೀಲ್ ಮೃತಪಟ್ಟಿದ್ದಾರೆ.
ಬೀದರ್ ನಲ್ಲಿ ಸಂಬಂಧಿಕರಿಗೆ ಮಗ ಸಾಯಿನಾಥ್ ಪಾಟೀಲ್ ಮದುವೆ ಕಾರ್ಡ್ ಕೊಟ್ಟು ವಾಪಸ್ ಬರುತ್ತಿದ್ದರು. ಆಗಲೇ ಮಧ್ಯ ರಾತ್ರಿ ಅಪಘಾತ ಸಂಭವಿಸಿದೆ.ಭಾಲ್ಕಿಯ ಸೇವಾಲಾಲ ತಾಂಡದ ಬಳಿ ಕಾರ್ ಪಲ್ಟಿ ಆಗಿದೆ. ಸ್ಥಳದಲ್ಲಿಯೇ ದಂಪತಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಈಶ್ವರ್ ಖಂಡ್ರೆ ಹಾಗೂ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಧನ್ನೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
02/12/2021 02:30 pm