ಲಖನೌ: ಜೀವನದಲ್ಲಿ ಜೊತೆಯಾಗಬೇಕಾದ ಜೋಡಿ ಹಸೆಮಣೆ ಏರುವ ಬದಲು ಮಸಣ ಸೇರಿದ ಘಟನೆ ಉತ್ತರ ಪ್ರದೇಶದ ಬಿಧುನಾ ಕೊತ್ವಾಲಿಯಲ್ಲಿ ನಡೆದಿದೆ.
ಹೌದು ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಸಚಿನ್ ಮತ್ತು ಸೋನಿ ಡಿಸೆಂಬರ್ 9ರಂದು ಮದುವೆಯಾಗುವ ತಯಾರಿಯಲ್ಲಿದ್ದರು.
ಇವರ ಪ್ರೀತಿಯನ್ನು ಒಪ್ಪಿದ ಎರಡು ಕುಟುಂಬದವರು ಮದುವೆ ಮಾಡಲು ಒಪ್ಪಿಗೆ ನೀಡಿದ್ದರು. ಆದರೆ ವಿಧಿಯಾಟ ಮದುವೆ ಶಾಪಿಂಗ್ ಬಂದ ಈ ಜೋಡಿ ವಾಪಸ್ ಮನೆಗೆ ಮರಳುವ ವೇಳೆ ಔರೈಯಾ ಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ಪ್ರಾಣ ಬಿಟ್ಟಿವೆ.
ಒಟ್ಟಿಗೇ ಬಾಳಿಬದುಕಬೇಕಾದ ಭಾವಿ ದಂಪತಿಯ ಅಂತ್ಯಕ್ರಿಯೆಯನ್ನು ಒಂದೇ ಕಡೆ ಎರಡೂ ಕುಟುಂಬದವರು ನೆರವೇರಿಸಿದ್ದಾರೆ.
PublicNext
16/11/2021 10:55 pm