ಬೆಂಗಳೂರು: ಗೋವಾದಿಂದ ಬೆಂಗಳೂರು ಕಡೆಗೆ ಬರುತ್ತಿದ ಖಾಸಗಿ ಬಸ್ ಹಾಗೂ ರೈಲು ನಿಲ್ದಾಣದಿಂದ ಬರುತ್ತಿದ ಆರ್ಮಿ ಬಸ್ ನಡುವೆ ರಾಜ ಭವನದ ಎದುರು ಇಂದು ಬೆಳಗ್ಗೆ ಅಪಘಾತ ಸಂಭವಿಸಿದೆ.
ಅಪಘಾತದ ನಂತರ ರಸ್ತೆಯಲ್ಲಿ ಆರ್ಮಿ ಬಸ್ ಚಾಲಕ ಹಾಗೂ ಖಾಸಗಿ ಬಸ್ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿ ೨೦ ನಿಮಿಷಗಳು ಟ್ರಾಫಿಕ್ ಜಾಮ್ ಉಂಟಾಗಿತ್ತು. ನಂತರ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನ ತಿಳಿಗೊಳಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು.
PublicNext
15/11/2021 02:08 pm