ದಾಂಡೇಲಿ(ಉತ್ತರ ಕನ್ನಡ): ಮೀನು ಹಿಡಿಯಲು ಗಾಳ ಹಾಕಿ ಕೂತಾಗ ಮೊಸಳೆ ಪಾಲಾಗಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ದಾಂಡೇಲಿ ಪಟ್ಟಣದ ಹೊರವಲದ ಕಾಳಿ ನದಿ ತಟದಲ್ಲಿ ಮೊಸಳೆ ಬಾಲಕನನ್ನು ಎಳೆದೊಯ್ದ ಘಟನೆ ರವಿವಾರ ನಡೆದಿತ್ತು. 15 ವರ್ಷ ವಯಸ್ಸಿನ ಮೊಹೀನ್ ಮೆಹಬೂಬ್ ಗುಲ್ಬರ್ಗ ಎಂಬಾತನೇ ಮೊಸಳೆಗೆ ಬಲಿಯಾದ ಬಾಲಕ.
ಬಾಲಕನನ್ನು ಮೊಸಳೆ ಎಳೆದೊಯ್ದ ಸುದ್ದಿ ತಿಳಿದ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಾಲಕನಿಗಾಗಿ ಸತತ ಶೋಧ ಕಾರ್ಯಾಚರಣೆ ನಡೆಸಿದ್ದರು. ಎರಡು ದಿನಗಳ ನಂತರ ನಿನ್ನೆ ಮಂಗಳವಾರ ಸಂಜೆ ಬಾಲಕನ ಶವ ಕಾಳಿ ನದಿಯಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬಾಲಕನ ಶವ ತೆಗೆದು ಕುಟುಂಬಸ್ಥರಿಗೆ ನೀಡಿದ್ದಾರೆ. ಪುತ್ರನ ಶವ ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
PublicNext
27/10/2021 10:50 pm