ಚಿತ್ರದುರ್ಗ :ಕುರಿಹಟ್ಟಿಯಲ್ಲಿದ್ದ ಎಳೆಯ ಕುರಿಮರಿಗಳ ಮೇಲೆ ತೋಳವೊಂದು ದಾಳಿ ಮಾಡಿದ್ದು, 16 ಕುರಿ ಮರಿಗಳು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೆ.ಆರ್.ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗಣೇ ಪೂಜಾರಿ ರಾಜಪ್ಪ ದಳವಾಯಿ ಅವರಿಗೆ ಸೇರಿದ ಕುರಿಮರಿಗಳಾಗಿವೆ. ಕುರಿಗೂಡಿನಲ್ಲಿ ಯಾರು ಇಲ್ಲದನ್ನು ಕಂಡ ತೋಳ ಈ ಮರಿಗಳ ಕುತ್ತಿಗೆ ಕಚ್ಚಿ ಸಾಯಿಸಿದೆ. ಮೃತಪಟ್ಟಿರುವ ಮರಿಗಳೆಲ್ಲವು 30-40 ದಿವಸದವುಗಳು.
PublicNext
20/10/2021 07:14 pm