ಚಿತ್ರದುರ್ಗ: ಅಪಘಾತವಾಗಿ ೧ ಘಂಟೆ ಆದರೂ ಸಾವು, ಬದುಕಿನ ನಡುವೆ ಲಾರಿ ಚಾಲಾಕ ಹೋರಾಟ ನಡೆಸುತ್ತಿದ್ದರೂ ಸ್ಥಳಕ್ಕೆ ಬಾರದ ಆಂಬುಲೆನ್ಸ್ ನಿಂದಾಗಿ ಚಾಲಕ ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡಿದ ದೃಶ್ಯ ಎಂತವರನ್ನು ಮನಕಲಕುವಂತಿದೆ
ಇಂತದೊಂದು ಹೃದಯವಿದ್ರಾವಕ ಘಟನೆ ನಡೆದಿದ್ದು ತಾಲೂಕಿನ ಭರಮಸಾಗರ ಹೋಬಳಿಯ ಕೊಳಾಲು ಗ್ರಾಮದಲ್ಲಿ.ಲಾರಿಯ ಟಯರ್ ಬ್ಲಾಸ್ಟ್ ಆಗಿದ್ದ ಕಾರಣ ಟಯರ್ ಬದಲಾಯಿಸಲು ಮುಂದಾಗಿದ್ದ ಚಾಲಕ , ಆದರೆ ಈ ಸಮಯದಲ್ಲಿ ಹಿಂಬದಿಯಿಂದ ಬಂದ ಇನ್ನೊಂದು ಲಾರಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕನ ಅರ್ಧ ದೇಹದ ಮೇಲೆ ಲಾರಿ ಚಕ್ರ ಉರುಳಿದೆ.ಈ ಸಂದರ್ಭದಲ್ಲಿ ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಿದ್ದರೂ ಹೈವೇ ಅಂಬುಲೆನ್ಸ್ ಸ್ಥಳಕ್ಕೇ ಬಾರದೇ ಇದ್ದುದರಿಂದ ಚಾಲಕ ನೋವಿನಿಂದ ರಸ್ತೆಯಲ್ಲಿಯೇ ಒದ್ದಾಡಿದ್ದಾನೆ. ಬಳಿಕ ಸ್ಥಳಕ್ಕೆ ಎಸ್ಪಿ ಜಿ.ರಾಧಿಕಾ, ಡಿವೈಎಸ್ಪಿ ಬಂದು ಪರಿಸ್ಥಿತಿ ಅವಲೋಕಿಸಿದರು ಸಹ ಅಂಬುಲೆನ್ಸ್, ಕ್ರೇನ್ ಮಾತ್ರ ಪತ್ತೆ ಇರಲಿಲ್ಲ.
PublicNext
01/10/2021 11:57 am