ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ರಸ್ತೆ ಪಕ್ಕದಲ್ಲಿ ನಿಂತ ಟ್ರ್ಯಾಕ್ಟರ್ ಟಾಲಿಗೆ ಬೈಕ್ ಡಿಕ್ಕಿ, ಓರ್ವ ಸಾವು ಇಬ್ಬರಿಗೆ ಗಂಭೀರ ಗಾಯ.!

ಯಾದಗಿರಿ: ರಸ್ತೆ ಪಕ್ಕದಲ್ಲಿ ನಿಂತ ಟ್ರ್ಯಾಕ್ಟರ್ ಟಾಲಿಗೆ ಬೈಕ್ವೊಂದು ಡಿಕ್ಕಿ ಹೊಡೆದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರ ಸ್ಥಿತಿ ಚಿಂತಜನಕವಾಗಿರೋ ಘಟನೆ, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬಾದ್ಯಾಪುರ ಗ್ರಾಮದ ಬಳಿ ನಡೆದಿದೆ.

ಇಂದು ಸಂಜೆ ವೇಳೆ ಶೆಟ್ಟಿಕೇರಾ ಗ್ರಾಮದಿಂದ ಬಾದ್ಯಾಪುರಕ್ಕೆ ಬರ್ತಿದ್ದ ಬೈಕ್ನಲ್ಲಿ ಮೂವರು ತೆರಳುತ್ತಿದ್ದು, ಟ್ರ್ಯಾಕ್ಟರ್ ಟಾಲಿಗೆ ರಭಸದಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಹರಿಶ್ಚಂದ್ರ ಎಂಬ ಯುವಕ ಮೃತಾಪಟ್ಟಿದ್ದಾನೆ.

ಇನ್ನು ದುರ್ಘಟನೆ ಸಂಭವಿಸಿದ ಸುದ್ದಿ ತಿಳಿದ ಜನರು ಸ್ಥಳಕ್ಕೆ ದೌಡಾಯಿಸಿ ಇನ್ನುಳಿದ ಇಬ್ಬರು ಗಂಭೀರವಾಗಿ ಗಾಯಗೊಂಡವರನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಘಟನೆ ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Edited By : Shivu K
PublicNext

PublicNext

20/09/2021 10:41 pm

Cinque Terre

100.13 K

Cinque Terre

0

ಸಂಬಂಧಿತ ಸುದ್ದಿ