ವಿಜಯಪುರ : ಬೈಕ್ ಗೆ ಹಿಟ್ ಆಂಡ್ ರನ್ ಘಟನೆ ಸಂಭವಿಸಿದೆ. ಘಟನೆಯಲ್ಲಿ ರಸ್ತೆ ಬದಿಗೆ ಬಿದ್ದ ಯುವಕ-ಯುವತಿ ರಕ್ತದ ಮಡುವಿನಲ್ಲಿ ಒದ್ದಾಡಿದ ಅಮಾನವೀಯ ದೃಶ್ಯಗಳು ಕಂಡು ಬಂದಿವೆ. ಹೌದು ನಿನ್ನೆ ಸಂಜೆ ವಿಜಯಪುರದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿಯ ದದಾಮಟ್ಟಿ ಕ್ರಾಸ್ ಬಳಿ ಭೀಕರ ಅಪಘಾತವೊಂದು ಸಂಭವಿಸಿದೆ. ಬಿಎಲ್ಡಿಇ ಕಾಲೇಜಿನಲ್ಲಿ ನರ್ಸಿಂಗ್ ವಿದ್ಯಾರ್ಥಿಯಾಗಿದ್ದ ಸಚಿನ್ ಶಿವಾನಂದ ಕುಂಬಾರ್ ಎಂಬ ಯುವಕ ಹಾಗೂ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಸುಜಾತಾ ಮಠಪತಿ ಎಂಬ ಯುವತಿ ಇಬ್ಬರು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು.
ಈ ವೇಳೆ ಬೈಕ್ ಗೆ ಬೇರೊಂದು ವಾಹನ ಡಿಕ್ಕಿ ಹೊಡೆದು ಹೊರೆಟು ಹೋಗಿದೆ. ಈ ವೇಳೆ ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಒದ್ದಾಡಿದ್ದಾರೆ. ಕಾಪಾಡಿ ಕಾಪಾಡಿ ಎಂದು ಅಂಗಲಾಚಿದರೂ ಯಾರೊಬ್ಬ ವ್ಯಕ್ತಿಯೂ ಸಹಾಯಕ್ಕೆ ಮುಂದಾಗಿಲ್ಲ. ಕಾಲು ಮುರಿದು ಕೊಂಡು ರಕ್ತದ ಮಡುವಿನಲ್ಲಿ ಬಿದ್ದ ಯುವಕ ಹಾಗೂ ಯುವತಿಯ ಚೀರಾಟದ ವಿಡಿಯೋ ಮಾಡಿದ್ದಾರೆಯೇ ಹೊರತು ಸಹಾಯಕ್ಕೆ ಮುಂದಾಗದಿರುವುದು ಖೇಧಕರ ಸಂಗತಿ..
ಇಂಡಿ ತಾಲೂಕಿನ ಬೂದಿಹಾಳ ಗ್ರಾಮದ ಸಚಿನ್ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ತಿಕೋಟ ಪಟ್ಟಣದ ಮಠಪತಿ ಗಲ್ಲಿ ನಿವಾಸಿ ಸುಜಾತಾಳಿಗೆ ಚಿಕಿತ್ಸೆ ಮುಂದುವರೆದಿದೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
19/09/2021 03:18 pm