ಚಿಂತಾಮಣಿ : ಲಾರಿ-ಜೀಪು ಮುಖಾಮುಖಿಯಿಂದಾಗಿ 7 ಮಂದಿ ಸಾವನ್ನಪ್ಪಿ ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯ ಮರಿ ನಾಯಕನ ಹಳ್ಳಿ ಬಳಿ ರವಿವಾರ ಸಂಭವಿಸಿದೆ.
ಚಿಂತಾಮಣಿ ತಾಡಿಗೊಲ್ ಗೌನಿಪಲ್ಲಿ ಕಡೆಗೆ ಜೀಪಿನಲ್ಲಿ ಪ್ರಯಾಣಿಕರನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಅಪಘಾತದ ರಭಸಕ್ಕೆ ಜೀಪು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಜೀಪ್ ನಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದು ಈ ಪೈಕಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡ ನಾಲ್ವರನ್ನು ಚಿಕಿತ್ಸೆಗಾಗಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತಪಟ್ಟವರ ವಿವರ ಲಭ್ಯವಾಗಿಲ್ಲ.
PublicNext
12/09/2021 05:23 pm