ಅಮರಾವತಿ: ಯುವಕನೋರ್ವ ಗಣಪತಿ ಮುಂದೆ ಸಿನಿಮಾ ಹಾಡೊಂದಕ್ಕೆ ಡ್ಯಾನ್ಸ್ ಮಾಡುತ್ತಿದ್ದಾಗ ಕುಸಿದು ಸಾವನ್ನಪ್ಪಿರುವ ದುರ್ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಕುಲ್ಲಯ್ಯಸ್ವಾಮಿ (ಚರಣ್) ಮೃತಪಟ್ಟ ಯುವಕ. ಅನಂತಪುರ ಜಿಲ್ಲೆಯ ಗುತ್ತಿ ಬಳಿಯ ಗೌತಮಿಪುರ ಕಾಲೋನಿಯಲ್ಲಿ ಅವಘಡ ಸಂಭವಿಸಿದೆ. ಯುವಕ ಕುಲ್ಲಯ್ಯಸ್ವಾಮಿ ಕುಸಿದು ಬೀಳುತ್ತಿದ್ದಂತೆ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಗುತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
12/09/2021 03:47 pm