ಆಗ್ರಾ: ಪ್ರೆಶರ್ ಕುಕ್ಕರ್ ನಲ್ಲಿ ತಲೆ ಸಿಲುಕಿಸಿಕೊಂಡ ಮಗುವಿನ ತಲೆಯನ್ನು ಹೊರ ತೆಗೆಯುವಲ್ಲಿ ಉತ್ತರ ಪ್ರದೇಶದ ಆಗ್ರಾದಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯರ ತಂಡವು ಯಶಸ್ವಿಯಾಗಿದೆ. ಒಂದೂವರೆ ವರ್ಷದ ಮಗುವೊಂದು ಆಟವಾಡುತ್ತಿದ್ದಾಗ ತನ್ನ ತಲೆಯನ್ನು ಪ್ರೆಷರ್ ಕುಕ್ಕರ್ ಒಳಗೆ ಸಿಲುಕಿಸಿಕೊಂಡಿದೆ. ಕುಕ್ಕರ್ ಚಿಕ್ಕದು ಇದ್ದುದರಿಂದ ಅದನ್ನು ತೆಗೆಯಲು ಸಾಧ್ಯವೇ ಆಗಲಿಲ್ಲ.
ಕುಟುಂಬದ ಸದಸ್ಯರು ಮನೆಯಲ್ಲಿ ಮಗುವಿನ ತಲೆಯನ್ನು ಕುಕ್ಕರ್ ನಿಂದ ಹೊರತೆಗೆಯಲು ಪ್ರಯತ್ನಿಸಿದರೂ ವಿಫಲರಾದರು.. ಕೂಡಲೇ ವೈದ್ಯರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಗ್ರೈಂಡರ್ ಯಂತ್ರದೊಂದಿಗೆ ಸ್ಥಳಕ್ಕೆ ದೌಡಾಯಿಸಿದ ವೈದ್ಯರ ತಂಡ ಮಗುವಿನ ತಲೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸತತ ಎರಡು ಗಂಟೆಗಳ ಕಾಲ ಶ್ರಮ ವಹಿಸಿ ಕುಕ್ಕರ್ ಕಟ್ ಮಾಡಿ ಮಗುವಿನ ಪ್ರಾಣ ಉಳಿಸಿದ್ದಾರೆ.
ಮನೆಯಲ್ಲಿ ಮಕ್ಕಳಿದ್ರೆ ತುಸು ಜಾಗೃತರಾಗಿರಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
PublicNext
29/08/2021 05:04 pm