ದಾವಣಗೆರೆ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಶಾಸಕ ರಾಮಪ್ಪ ಅವರು ತಮ್ಮ ಕಾರಿನಲ್ಲಿ ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹರಿಹರ ತಾಲೂಕಿನ ದಿಟೂರ ಗ್ರಾಮದ ಬಳಿ ವ್ಯಕ್ತಿ ಸೇವಿಸಿ ಒದ್ದಾಡುತ್ತಿದ್ದ. ಎಸ್. ರಾಮಪ್ಪ ಅವರು ಆತನನ್ನು ರಕ್ಷಿಸಿ ಅವರದ್ದೇ ಕಾರಿನಲ್ಲಿ ಆಸ್ಪತ್ರೆಗೆ ಕರತಂದು ಸೇರಿಸಿದರು. ಮಧ್ಯಾಹ್ನ ಹರಿಹರ ತಾಲೂಕಿನ ಕೊಂಡಜ್ಜಿ ಮೂಲಕ ಹರಿಹರಕ್ಕೆ ಶಾಸಕರು ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ದಿಟೂರ ಗ್ರಾಮದ ಬಳಿ ವ್ಯಕ್ತಿಯೊರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಾಗ ಆತನ ಸಂಬಂಧಿಕರು ಆಸ್ಪತ್ರೆಗೆ ತೆರಳಲು ವಾಹನ ಹುಡುಕಾಟ ನಡೆಸಿದ್ದರು. ಆ ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಶಾಸಕ ರಾಮಪ್ಪ, ತಮ್ಮದೇ ಕಾರ್ ನಲ್ಲಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯನ್ನ ಹರಹರ ತಾಲೂಕು ಆಸ್ಪತ್ರೆಗೆ ಕರೆ ತಂದಿದ್ದಾರೆ. ಬಳಿಕ, ಅಲ್ಲಿ ವೈದ್ಯರಿಗೆ ತುರ್ತಾಗಿ ಸೂಕ್ತ ಚಿಕಿತ್ಸೆ ನೀಡುವಂತೆ ಹೇಳಿ ವ್ಯಕ್ತಿಯನ್ನ ದಾಖಲು ಮಾಡಿದ್ದಾರೆ. ಹರಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
10/08/2021 06:51 pm