ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಡೆ ಕುಸಿದು ಬಾಲಕಿ ದಾರುಣ ಸಾವು

ಚಿತ್ರದುರ್ಗ: ಮನೆಯ ಗೋಡೆ ಕುಸಿದ ಪರಿಣಾಮ ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಬಾಣಗೆರೆ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ. ಮೃತ ಬಾಲಕಿಯನ್ನು ಅರ್ಪಿತಾ (12) ಎಂದು ಗುರುತಿಸಲಾಗಿದೆ.

ಮೃತಳ ತಂದೆ ರವಿಕುಮಾರ್ ಹಾಗೂ ಅವರ ಮಾವ ಮಂಜುನಾಥ್ ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದರು. ಕಳೆದ ಕೆಲ ದಿನಗಳಿಂದ ನಿರಂತರ ಮಳೆ ಸುರಿದ ಪರಿಣಾಮ ಮಂಜುನಾಥ್ ಅವರ ಮನೆಯ ಮಣ್ಣಿನ ಗೋಡೆ ಶಿಥಿಲಗೊಂಡಿತ್ತು. ಗೋಡೆಗೆ ಹೊಂದಿಕೊಂಡಂತೆ ರವಿಕುಮಾರ್ ಗುಡಿಸಲು ನಿರ್ಮಿಸಿಕೊಂಡಿದ್ದರು.

ಚಿಕ್ಕ ಗುಡಿಸಲಲ್ಲಿ ರವಿಕುಮಾರ್ ಆತನ ಪತ್ನಿ ಕವಿತಾ, ಕಿರಿಯ ಮಗಳು ಅರ್ಪಿತಾ ಹಾಗೂ ಹಿರಿಯ ಮಗಳು ಜಲಜಾಕ್ಷಿ ಹಾಗೂ ಅವರ ಅತ್ತೆ ಮಲಗಿದ್ದರು. ಈ ವೇಳೆ ಮುಂಜಾನೆ ಗೋಡೆ ಕುಸಿದ ಪರಿಣಾಮ ಅರ್ಪಿತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಉಳಿದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಚಿಕ್ಕಜಾಜೂರು ಪಿಎಸ್‍ಐ ಬಾಹುಬಲಿ ಎಂ.ಪಡನಾಡ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಜಾಜೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

07/08/2021 12:09 pm

Cinque Terre

32.9 K

Cinque Terre

0

ಸಂಬಂಧಿತ ಸುದ್ದಿ