ಚಿತ್ರದುರ್ಗ : ರಾಜು ಫೀಡ್ಸ್ ಫುಡ್ ಫ್ಯಾಕ್ಟರಿಯಲ್ಲಿ ರಾತ್ರಿ ಮಲಗಿದ್ದ ವೇಳೆ ಚೀಲ ಬಿದ್ದು ಮದುಮಗ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದ ಬಾಬಾ (28) ವರ್ಷ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮೇಟಿಕುರ್ಕೆ - ಸೂರಗೊಂಡನಹಳ್ಳಿ ರಸ್ತೆಯಲ್ಲಿರುವ ರಾಜು ಫೀಡ್ಸ್ ಫುಡ್ ಫ್ಯಾಕ್ಟರಿಯಲ್ಲಿ ಬಾಬ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನು. ರಾತ್ರಿ ಮಲಗಿದ್ದ ವೇಳೆ ಚೀಲ ಮೇಲೆ ಬಿದ್ದು ದ್ದರಿಂದ ಬಾಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದುರದೃಷ್ಟವೆಂದರೆ ಬಾಬ ಮದುವೆಯಾಗಿ 25 ದಿನಗಳಾಗಿತ್ತು ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಹಿರಿಯೂರು ಗ್ರಾಮಾಂತರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತನ ಕುಟುಂಬಕ್ಕೆ ಫ್ಯಾಕ್ಟರಿಯಿಂದ ಪರಿಹಾರ ನೀಡುವಂತೆ ಸಂಬಂಧಿಕರು ಆಗ್ರಹಿಸಿದ್ದರು. ಅದರಂತೆ ಫ್ಯಾಕ್ಟರಿ ಯಿಂದ ಮೃತ ವ್ಯಕ್ತಿಯ ಕುಟುಂಬಕ್ಕೆ 11 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
PublicNext
30/07/2021 07:41 pm