ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ ಅಂತಾ ಸಂಚಾರಿ ಪೊಲೀಸರು ಹೇಳ್ತಾನೇ ಇರ್ತಾರೆ. ಆದ್ರೂ ನಾವು ಅವರ ಮಾತು ಕೇಳೋಲ್ಲ. ಸ್ವಲ್ಪ ಹುಷಾರು ತಪ್ಪಿದರೂ ಏನೇನೋ ಅವಾಂತರ. ಅನಾಹುತಗಳು ಆಗಿಬಿಡುತ್ತವೆ. ಆದಕ್ಕೆ ಮತ್ತೊಂದು ವಿಡಿಯೋ ಸಾಕ್ಷಿಯಾಗಿದೆ.
ಆಂಧ್ರಪ್ರದೇಶದಲ್ಲಿ ಭಾನುವಾರ ರಸ್ತೆ ಅಪಘಾತದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಹಿಂದೆಮುಂದೆ ನೋಡದೆ ರಸ್ತೆ ನಿಯಮವನ್ನು ಪಾಲಿಸದೆ ಏಕಾಏಕಿ ಹೆದ್ದಾರಿಯನ್ನು ದಾಟಲು ಹೋದಾಗ ಬೈಕ್ ಸವಾರನು ಬಂದು ಗುದ್ದಿದ್ದಾನೆ. ಪರಿಣಾಮ ಇಬ್ಬರೂ ಮುಗ್ಗರಿಸಿ ಬಿದ್ದು ಮೈ-ಕೈ ಊನ ಮಾಡಿಕೊಂಡಿದ್ದಾರೆ.
PublicNext
25/02/2021 10:00 pm