ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೀಕರ ರಸ್ತೆ ಅಪಘಾತ 14 ಜನ ದುರ್ಮರಣ : ಕೆಲವರ ಸ್ಥಿತಿ ಚಿಂತಾಜನಕ

ಕರ್ನೂಲ್ (ಆಂಧ್ರಪ್ರದೇಶ): ಬೆಳ್ಳಂಬೆಳಗ್ಗೆ ಎಲ್ಲರೂ ಕಣ್ಣು ಬಿಡುವ ವೇಳೆಗೆ ಅಲ್ಲೊಂದು ಘೋರ ರಸ್ತೆ ಅಪಘಾತದಲ್ಲಿ 14 ಜನ ಚಿರನಿದ್ರೆಗೆ ಜಾರಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಸಂಭವಿಸಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ವೆಲ್ದುರ್ಥಿ ಬಳಿಯ ಮಾದಾಪುರ ಸಮೀಪ ಈ ಘಟನೆ ನಡೆದಿದೆ. ಅಪಘಾತದಲ್ಲಿ ಹದಿನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದೆ.

ಚಿತ್ತೂರು ಜಿಲ್ಲೆಯ ಮದನಪಲ್ಲೆಯಿಂದ ಅಜ್ಮೀರ್ ದರ್ಗಾಕ್ಕೆ ಬಸ್ ಪ್ರಯಾಣಿಸುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಮಿನಿ ಬಸ್ ನಲ್ಲಿ ಒಟ್ಟು 18 ಪ್ರಯಾಣಿಕರಿದ್ದರು. 14 ಜನರು ಮೃತಪಟ್ಟಿದ್ದು ಮತ್ತು ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

14/02/2021 07:53 am

Cinque Terre

101.19 K

Cinque Terre

6