ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: ಮಗುಚಿದ ಟಿಟಿ 3 ಸಾವು, 11 ಜನಕ್ಕೆ ಗಾಯ

ಚಾಮರಾಜನಗರ: ರಾತ್ರಿ ನಿದ್ರೆಗೆ ಜಾರಿದವರು ಬೆಳಗಾಗುವುದರಲ್ಲಿ ಚಿರನಿದ್ರೆಗೆ ಜಾರಿದ್ದಾರೆ.

ಹೌದು ರಸ್ತೆ ಬದಿ ಹಳ್ಳಕ್ಕೆ ಟೆಂಪೋ ಟ್ರಾವೆಲರ್ ಮಗುಚಿ ಮೂವರು ಸಾವಿಗೀಡಾಗಿರುವ ಘಟನೆ ತಾಲೂಕಿನ ಸುವರ್ಣಾವತಿ ಜಲಾಶಯದ ಸಮೀಪ ಶುಕ್ರವಾರ ಬೆಳಗಿನ ಜಾವ 4.30 ರ ಸುಮಾರಿಗೆ ನಡೆದಿದೆ.

ಟಿಟಿ ವಾಹನ ತಮಿಳುನಾಡಿನ ತಿರುಪೂರ್ ನಿಂದ ಮೈಸೂರಿಗೆ ಹೋಗುತ್ತಿತ್ತು. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ.

ಮೃತಪಟ್ಟವರನ್ನು ತಮಿಳುನಾಡಿನ ತಿರುಪೂರಿನ ಕನಕಪಾಳ್ಯಂ, ಕಸ್ತೂರುಬಾಯಿ ನಗರದ ಸುಬ್ರಹ್ಮಣ್ಯ (75), ಅಮರಾವತಿ (65) ಎಂದು ಗುರುತಿಸಲಾಗಿದ್ದು, ಇನ್ನೋರ್ವನ ಹೆಸರು ತಿಳಿದುಬಂದಿಲ್ಲ.

ರಾಷ್ಟ್ರೀಯ ಹೆದ್ದಾರಿ 209 ರ ಗುಡಿಬೋರೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಈ ಅವಘಡ ಸಂಭವಿಸಿದೆ.

ಗಾಯಾಳುಗಳನ್ನು ಚಾಮರಾಜನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By : Nirmala Aralikatti
PublicNext

PublicNext

08/01/2021 09:43 am

Cinque Terre

72.26 K

Cinque Terre

0

ಸಂಬಂಧಿತ ಸುದ್ದಿ