ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಕ್ಕಿ ಹೊಡೆದು ಬೈಕ್ ಮೇಲೆ ಹರಿದ ಕಾರು; ಸವಾರರು ಗ್ರೇಟ್ ಎಸ್ಕೇಪ್.!

ಸಾಮಾಜಿಕ ಜಾಲತಾಣದಲ್ಲಿ ಭೀಕರ ಅಪಘಾತಗಳ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಸದ್ಯ ಇಂತಹದ್ದೇ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಘಟನೆಯಲ್ಲಿ ಸವಾರರು ಗ್ರೇಟ್‌ ಎಸ್ಕೇಪ್ ಆಗಿದ್ದಾರೆ.

ಸೌತ್‌ಕರೋಲಿನಾದ ಮ್ರೆಟಲ್ ಬೀಚ್ ಸಮೀಪದ ಸಿಗ್ನಲ್ ಸಮೀಪದಲ್ಲಿ ಈ ಘಟನೆ ನಡೆದಿದೆ. ರೆಡ್‌ ಸಿಗ್ನಲ್ ಬಿದ್ದ ಎರಡು ಸವಾರರು ಬೈಕ್‌ಗಳನ್ನು ನಿಲ್ಲಿಸಿದ್ದರು. ಈ ವೇಳೆ ಹಿಂದೆ ಬಂದ ಕಾರು ಚಾಲಕ ನಿಯಂತ್ರಣ ಇಬ್ಬರು ಕುಳಿತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಸವಾರರ ಮೇಲೆ ಹಿಂದೆ ಕಾರು ಹತ್ತಿ ಬರುತ್ತದೆ. ತಕ್ಷಣವೇ ಅಲ್ಲಿದ್ದ ಜನರು ಸವಾರರ ರಕ್ಷಣೆಗೆ ಮುಂದಾಗುತ್ತಾರೆ. ಅದೃಷ್ಟವಶಾತ್ ಬೈಕ್ ಮೇಲಿದ್ದ ವ್ಯಕ್ತಿಗೆ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಆ ವ್ಯಕ್ತಿಯನ್ನ ಜೊತೆಗಿದ್ದ ಮಹಿಳೆಗೆ ಚಿಕ್ಕಪುಟ್ಟ ಗಾಯಗಳಾಗಿವೆ. ತಕ್ಷಣವೇ ಇಬ್ಬರನ್ನ ಅಲ್ಲೇ ಇದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈಗ ಇಬ್ಬರೂ ಸೇಫ್ ಆಗಿದ್ದಾರೆ.

Edited By : Nagesh Gaonkar
PublicNext

PublicNext

05/06/2022 03:53 pm

Cinque Terre

84.71 K

Cinque Terre

0

ಸಂಬಂಧಿತ ಸುದ್ದಿ