ಕೊರಟಗೆರೆ: ಇದೊಂದು ಶಾಪ ಇವರನ್ನು ಕಾಡುತ್ತಿದೆ. ಪ್ರತಿ 4 ವರ್ಷಕ್ಕೊಮ್ಮೆ ಮನೆತನದಲ್ಲಿ ಸಾವು, ಎಲ್ಲವೂ ಒಂದೇ ಜಾಗದಲ್ಲಿ ನಡೆಯುತ್ತಿದೆ ಏನಿದು ಸಾವಿನ ಕಥೆ ಅಂತೀರಾ...ಈ ವರದಿ ನೋಡಿ..!
ನಾವು ಹೇಳಲು ಹೋರಟಿರೋ ಸ್ಟೋರಿ ನಿಜಕ್ಕೂ ನಂಬಲಾರದ, ಊಹೆಗೂ ನಿಲುಕದ ಸಂಗತಿ. ಈ ಸಂಗತಿಗಳನ್ನು ಕೇಳಿದ್ರೇ ನೀವು ಬೆಚ್ಚಿಬೀಳೋದು ಗ್ಯಾರಂಟಿ. ಇದು ಕಲ್ಪತರು ನಾಡು ಕೊರಟಗೆರೆ ತಾಲ್ಲೂಕು ತೊಗರಿಘಟ್ಟ ಗ್ರಾಮದಲ್ಲಿ 4 ವರ್ಷಕ್ಕೆ ಒಂದು ಅನಾಹುತ ನಡೆದುಹೋಗುತ್ತೆ. ಅಂದು
ಕೊಳ್ಳದಿದ್ದ ರೂಪದಲ್ಲಿ ನೋವಾಗುತ್ತಿದೆ.
ಗ್ರಾಮದ ಧರ್ಮಣ್ಣ ಎನ್ನೋ ಕುಟುಂಬ, ದೊಡ್ಡ 20 ಕೂಡು ಕುಟುಂಬ. ಆದ್ರೆ ಕಾಲ ಕಳೆದಂತೆ ಅಣ್ಣ-ತಮ್ಮಂದಿರು ದೂರವಾಗುತ್ತಾ ತಮ್ಮ ಕುಟುಂಬ ಗಳನ್ನು ಮಾಡಿಕೊಂಡು ಜೀವನ ಮಾಡುತ್ತಾ ಬಂದಿದ್ದಾರೆ. ಎಲ್ಲರೂ ಕೂಡ ಒಂದೆ ಮನೆ ದೇವರಿಗೆ ಹೋಗೋದು ಬರೋದು ಕೂಡ ಸಹಜ. ಹೀಗೆ ಇದ್ದ ಕುಟುಂಬದಲ್ಲಿ 4 ವರ್ಷಕ್ಕೆ ಒಂದು ಸಾವಾಗುತ್ತಿದೆ. ಇದ್ರಿಂದ ಇಡೀ ಕುಟುಂಬ ಜೊತೆಗೆ ಗ್ರಾಮವೇ ಶಾಕ್‌ನಲ್ಲಿದೆ. ಇಷ್ಟಕ್ಕೂ ಯಾಕೆ ಹೀಗೆ ಸಾಯುತ್ತಿದ್ದಾರೆ ಅಂತೀರಾ..! ಈ ಕುಟುಂಬಕ್ಕೆ ಒಂದು ಶಾಪ ಇದೆಯಂತೆ ಅದು ಮುನಿಯಪ್ಪ ಶಾಪನೋ ಅಥವಾ ನಾಗರ ಶಾಪವೋ ಗೊತ್ತಿಲ್ಲ..ಈ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರೂ ಉತ್ತರ ಸಿಕ್ಕಿಲ್ಲ.
ಸದ್ಯ ಒಂದೇ ಮನೆತನದ ಐವರು ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ನಡೆದಿದೆ.ಪ್ರತಿ 4 ವರ್ಷಕ್ಕೊಮ್ಮೆ ಹಾವು ಕಚ್ಚಿ ಸಾಯುತ್ತಿದ್ದು ಇದ್ರಿಂದ ಧರ್ಮಣ್ಣ ಕುಟುಂಬ ಕಂಗಾಲಾಗಿದ್ದಾರೆ. ಕಳೆದ ಬುಧವಾರ ರಾತ್ರಿ ಗ್ರಾಮದ ಗೋವಿಂದರಾಜು ಹೊಲಕ್ಕೆ ನೀರು ಕಟ್ಟಲು ಹೋಗಿದ್ದಾರೆ. ಈ ವೇಳೆ ಕಾದು ನಿಂತಿದ್ದ ಹಾವು ಕಾಲಿಗೆ ಕಚ್ಚಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಕಳೆದ 20-25 ವರ್ಷಗಳಲ್ಲಿ ಧರ್ಮಣ್ಣ ಕುಟುಂಬದ ಹನುಮಂತಪ್ಪ, ಧರ್ಮಣ್ಣ, ವೆಂಕಟೇಶ್, ಶ್ರೀನಿವಾಸ್ ಇತ್ತೀಚಿಗೆ ಗೋವಿಂದರಾಜು ಒಂದೇ ಜಾಗದಲ್ಲಿ ಹಾವಿಗೆ ಬಲಿಯಾಗಿದ್ದಾರೆ. ಅದು ಕೂಡ ಕೇವಲ ಅರ್ಧ ಕಿಲೊಮೀಟರ್ ಅಂತರದಲ್ಲಿ, ಜಮೀನಿನಲ್ಲಿ ಮುನಿಯಪ್ಪ ಗುಡಿಯಿದ್ದು ಈ ಮೊದಲು 20 ಕುಟುಂಬ ಸೇರಿ ಪೂಜಿಸಿ ಅಡುಗೆ ಮಾಡಿ ಮುನಿಯಪ್ಪ ಮಾಡುತ್ತಿದರಂತೆ ಆದರೆ ಕಾಲಕಳೆದಂತೆ ಮನೆಗೆ ಸೊಸೆಯಂದಿರು ಬಂದಂತೆ ದೂರವಾಗಿದ್ದು, ಈಗ 4 ಕುಟುಂಬಗಳು ಸೇರಿ ಪೂಜೆ ಮಾಡುತ್ತಿದ್ದಾರಂತೆ. ಇದು ಕೂಡ ಹಾವಿನ ದ್ವೇಷಕ್ಕೆ ಕಾರಣ ಇರಬಹುದು ಎನ್ನಲಾಗಿದೆ. ಇದರ ಜೊತೆಗೆ ಈ ಹಿಂದೆ ತಮ್ಮ ಹೊಲದ ಬಳಿ ರಸ್ತೆ ಬದಿಯಲ್ಲಿ ಇದ್ದ ಅರಳಿಮರವನ್ನ ಧರ್ಮಣ್ಣ ಕಡಿದು ಹಾಕಿಸಿದ್ದರಂತೆ. ಅದರ ಶಾಪದಿಂದ ಹೀಗೆ ಆಗುತ್ತಿರಬಹದು ಎಂಬ ಮಾತುಗಳು ಕೇಳಿಬಂದಿವೆ.
ಇನ್ನೂ ಶಾಸ್ತ್ರ ಕೇಳಿದ್ರೆ ಎಲ್ಲಾರೂ ಒಂದಾಗಿ ಸೇರಿ ಮುನಿಯಪ್ಪ ಮಾಡಿದ್ರೆ ಸಮಸ್ಯೆ ಬಗೆಹರಿಯಬಹುದು ಅಂತಾ ಹೇಳಿದ್ದಾರಂತೆ. ಸದ್ಯ ಮನೆತನದಲ್ಲಿ ಬರೀ ಗಂಡಸರೇ ಬಲಿಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಇದೇ ಕುಟುಂಬದ 11 ಜನರಿಗೆ ಹಾವು ಕಚ್ಚಿದ್ದು ಆರು ಜನರು ಉಳಿದಿದ್ದಾರೆ. 5 ಜನ ಸಾವನ್ನಪ್ಪಿದ್ದಾರೆ. ಇದು ನಿಜಕ್ಕೂ ನಂಬಲಾರದ ಸಂಗತಿ. ಹಾವಿನ ದ್ವೇಷವೋ ದೇವರ ಶಾಪವೋ ಅರಳಿಮರ ಕಡಿತಕ್ಕೋ ಒಟ್ಟು ಬಾಳಿ ಬದುಕಬೇಕಿದ್ದ ಪುರುಷರು ಮಾತ್ರ ಬಲಿಯಾಗುತ್ತಿರುವುದು ದುರಂತ. ಕಾಕತಾಳೀಯ ಎಂಬಂತೆ ಈ ಘಟನೆಗಳು ನಡೆಯುತ್ತಿದ್ದು ಇಡೀ ಜಿಲ್ಲೆಯಾದ್ಯಂತ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ವರದಿ: ರಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್
PublicNext
24/08/2022 01:38 pm