ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾರಿ ಏರಿ ಬಂದ ಜವರಾಯ: ರಕ್ಷಿಸಲು ಬಂದವರು ಸತ್ತೆ ಹೋದರು! ವಿಡಿಯೋ ವೈರಲ್

ಹೈದರಾಬಾದ್: ಮನುಷ್ಯನ ಬದುಕಿನಲ್ಲಿ ವಿಧಿಯಾಟ ತುಂಬಾ ಘೋರವಾಗಿರತ್ತೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ ಎಂದರೆ ತಪ್ಪಾಗಲಾರದು.

ಹೌದು ಅಪಘಾತವಾದವರನ್ನು ರಕ್ಷಿಸಲು ಹೋದವರು ಮಸಣ ಸೇರಿದ ಘಟನೆ ನೋಡುಗರ ಎದೆ ಝಲ್ ಎನ್ನುವಂತೆ ಮಾಡಿದೆ.

ತೆಲಂಗಾಣದ ಕರೀಮ್ ನಗರ-ಸಿದ್ದಿಪೇಟ್ ರಸ್ತೆಯು ಕೆಲವೇ ಸೆಕೆಂಡುಗಳಲ್ಲಿ ಎರಡು ಭೀಕರ ರಸ್ತೆ ಅಪಘಾತಕ್ಕೆ ಶುಕ್ರವಾರ ಸಾಕ್ಷಿಯಾಗಿದೆ.

ಮಧ್ಯಾಹ್ನ 2ಗಂಟೆ ವೇಳೆ ಕರೀಮ್ ನಗರದಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಪ್ರಾಣಬಿಟ್ಟರೆ, ಕಾರು ಅಪಘಾತದ ಘಟನಾ ಸ್ಥಳಕ್ಕೆ ದಾರಿಹೋಕರು ಮತ್ತು ಇಬ್ಬರು ಪೊಲೀಸರು ಧಾವಿಸಿ, ರಕ್ಷಣ ಕಾರ್ಯಾಚರಣೆಯಲ್ಲಿ ತೊಡಗಿರುವಾಗ ಲಾರಿ ಏರಿ ಬಂದ ಜವರಾಯ ಜನರ ಗುಂಪಿನತ್ತ ನುಗ್ಗಿ ಇಬ್ಬರ ಪ್ರಾಣ ಬಲಿ ಪಡೆದಿದೆ.

ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನೋಡುಗರಲ್ಲಿ ನಡುಕ ಹುಟ್ಟಿಸುವಂತಿದೆ.

ಇನ್ನು ರಕ್ಷಿಸಲು ಬಂದವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನಪ್ಪಿದರೆ ಸಿದ್ದಿಪೇಟ್ ಇನ್ಸ್ ಪೆಕ್ಟರ್ ಮತ್ತು ಓರ್ವ ಕಾನ್ಸ್ ಟೇಬಲ್ ಸೇರಿದಂತೆ ಅನೇಕ ಮಂದಿ ಗಾಯಗೊಂಡಿದ್ದಾರೆ.

ಅಪಘಾತ ಸ್ಥಳಕ್ಕೆ ಸಿದ್ದಿಪೇಟ್ ನ ಪೊಲೀಸ್ ಕಮಿಷನರ್ ಡಿ. ಜೋಯೆಲ್ ಡೇವಿಸ್ ಮತ್ತು ಅಸಿಸ್ಟೆಂಟ್ ಕಮಿಷನರ್ ರಾಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೊದಲನೇ ಕಾರು ಅಪಘಾತದಲ್ಲಿ ಮೂರು ಮಂದಿ ಮೃತಪಟ್ಟರೆ, ಟ್ರಕ್ ಅಪಘಾತದಲ್ಲಿ ಮತ್ತಿಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಕೆಲವೇ ಕ್ಷಣಗಳಲ್ಲಿ ನಡೆದ ಎರಡು ಅಪಘಾತಗಳಿಂದ ಒಟ್ಟು ಐದು ಮಂದಿ ಪ್ರಾಣಬಿಟ್ಟಿದ್ದಾರೆ.

Edited By : Nirmala Aralikatti
PublicNext

PublicNext

04/12/2020 11:16 pm

Cinque Terre

115.81 K

Cinque Terre

10