ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟರ್ಕಿಯಲ್ಲಿ ಭೀಕರ ಭೂಕಂಪ : 18 ಗಂಟೆ ಬಳಿಕ ಅವಶೇಷಗಳ ಅಡಿಯಿಂದ ಪಾರಾದ ತಾಯಿ, 3 ಮಕ್ಕಳು

ಇಜ್ಮೀರ್ (ಟರ್ಕಿ)ಮ: ಟರ್ಕಿಯ ಬಂದರುನಗರ ಇಝ್ಮಿರ್ ನಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂಕಂಪಕ್ಕೆ ಕಟ್ಟಡ ಕುಸಿದು ಬಿದ್ದು ಅವಶೇಷಗಳಡಿಯಲ್ಲಿ ಸಿಲುಕಿದ್ದ ತಾಯಿ ಮಕ್ಕಳು 18 ಗಂಟೆಗಳ ಬಳಿಕ ಜೀವಂತವಾಗಿ ಆಚೆ ಬಂದಿದ್ದಾರೆ.

ಈ ಭೂಕಂಪದಲ್ಲಿ ಕನಿಷ್ಠ 20ಕ್ಕೂ ಅಧಿಕ ಕಟ್ಟಡಗಳು ಕುಸಿದು ಬಿದ್ದಿದ್ದು, ಅಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಈವರೆಗೆ 100ಕ್ಕೂ ಅಧಿಕ ಮಂದಿಯನ್ನು ಅವಶೇಷಗಳಡಿಯಿಂದ ಪಾರು ಮಾಡಲಾಗಿದೆಯೆಂದು ಟರ್ಕಿಯ ಪರಿಸರಸಚಿವ ಮುರಾತ್ ಕುರುಮ್ ತಿಳಿಸಿದ್ದಾರೆ.

ಟರ್ಕಿಯ ಪಶ್ಚಿಮದ ಕರಾವಳಿ ಪ್ರದೇಶಗಳಲ್ಲಿ 25ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಭೂಕಂಪದಿಂದಾಗಿ 800ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

ಭೂಕಂಪದ ಬಳಿಕ 520ಕ್ಕೂ ಅಧಿಕ ಪಶ್ಚಾತ್ ಕಂಪನಗಳು ಉಂಟಾಗಿರುವುದಾಗಿ ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

Edited By : Nirmala Aralikatti
PublicNext

PublicNext

31/10/2020 10:50 pm

Cinque Terre

70.32 K

Cinque Terre

1

ಸಂಬಂಧಿತ ಸುದ್ದಿ