ಹಾವೇರಿ: ಹಾವೇರಿ ಜಿಲ್ಲೆಯ ಹಾನಗಲ್ ಬಳಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳು ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಲಭ್ಯವಾಗಿದೆ.
ಹೌದು. ಲಾಡ್ಜ್‌ನ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು ಇವಾಗಿವೆ. ಲಾಡ್ಜ್‌ಗೆ ಏಕಾಏಕಿ ನುಗ್ಗಿದ ಆರೋಪಿಗಳ ಚಲನವಲನಗಳು ಸೆರೆಯಾಗಿದೆ. ಸಂತ್ರಸ್ತೆಯನ್ನು ಲಾಡ್ಜ್‌ನಿಂದ ಎಳೆದು ತಂದ ಆರೋಪಿಗಳು, ಬಳಿಕ ಸಂತ್ರಸ್ತೆಯನ್ನು ಬೈಕ್ ಮೇಲೆ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಕಾರಿನ ಒಳಗೆ ಯುವತಿಯನ್ನು ಸುತ್ತಲೂ ಕುಳಿತ ಯುವಕರು ನಿಂದಿಸಿದ್ದಾರೆ. ಆಕೆ ಫೋಟೋ ತಗೆಯಿರಿ ಎಂದು ವ್ಯಕ್ತಿ ಹೇಳಿದಾಗ ಯುವತಿ ಬೇಡ, ಬೇಡ ಎಂದು ಮನವಿ ಮಾಡಿಕೊಂಡಿದ್ದಾಳೆ. ಆಗ ಕಾರಿನ ಹೊರಗೆ ನಿಂತು ಅವಾಚ್ಯ ಪದಗಳಿಂದ ಬೈಯುತ್ತಿದ್ದ ವ್ಯಕ್ತಿಯೋರ್ವ ಯುವತಿ ಮುಖಕ್ಕೆ ಕಟ್ಟಿದ್ದ ಬಟ್ಟೆಯನ್ನು ಎಳೆದಿದ್ದಾನೆ. ಜೊತೆಗೆ, 'ಇಸ್ಲಾಂ ಧರ್ಮಕ್ಕೆ ಮೋಸ ಮಾಡ್ತೀಯಾ.?' ಎಂದು ನಿಂದಿಸಿದ್ದಾನೆ.
ಇನ್ನು ಸಂತ್ರಸ್ತೆಯ ಜೊತೆಗಿದ್ದ ಬಸ್ ಡ್ರೈವರ್ ಸೋಮಶೇಖರನನ್ನು ಬೈಕ್ ಮೇಲೆ ಕೂರಿಸಿಕೊಂಡು ಹೋಗಿದ್ದಾರೆ. ಹಲ್ಲೆಗೊಳಗಾದ ಬಸ್ ಡ್ರೈವರ್ ಸೋಮಶೇಖರ್ ಈಗ ನಾಪತ್ತೆಯಾಗಿದ್ದು, ಹಾನಗಲ್ ಪೊಲೀಸರು ಸೋಮಶೇಖರ್ ಹುಡುಕಾಟದಲ್ಲಿದ್ದಾರೆ.
PublicNext
11/01/2024 11:15 am