ನವದೆಹಲಿ : 14 ವರ್ಷಗಳ ಬಳಿಕ ಇದೇ ಮೊದಲ ಬಾರಿ ಈ ಬಗ್ಗೆ ಲಲಿತ ಮೋದಿ ಮೌನ ಮುರಿದಿದ್ದಾರೆ. ಐಪಿಎಲ್ ಒಡಲಾಳದಲ್ಲಿ ಹುದುಗಿಕೊಂಡಿದ್ದ ಹಲವು ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲೂ ಸಂಸದ ಶಶಿ ತರೂರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸಂಸದ ಶಶಿ ತರೂರ್ ಪತ್ನಿ ದಿವಂಗತ ಸುನಂದ ಪುಷ್ಕರ್ ನಯಾಪೈಸೆ ಬಂಡವಾಳ ಹೂಡಿರಲಿಲ್ಲ. ಆದರೆ ಲಾಭದಲ್ಲಿ 15% ನಷ್ಟು ಪಡೆಯುವ ಬಗ್ಗೆ ಉಲ್ಲೇಖವಾಗಿತ್ತು. ಇದನ್ನು ನೋಡಿ ನಾನು ಅಗ್ರಿಮೆಂಟ್ಗೆ ಸಹಿ ಹಾಕಲ್ಲ ಎಂದ ತಕ್ಷಣವೇ ಶಶಿ ತರೂರ್ ನನಗೆ ಫೋನ್ ಮಾಡಿದ್ದರು. ನಿಮ್ಮ ಮೇಲೆ ಐಟಿ, ಇಡಿ ದಾಳಿ ಮಾಡಿಸುವುದಾಗಿ ಧಮ್ಕಿ ಹಾಕಿದ್ದರು ಎಂದು ಲಲಿತ ಮೋದಿ ಆರೋಪಿಸಿದ್ದಾರೆ.
ಈ ಹಿಂದೆ 2010ರಲ್ಲಿ ಅವರ ಮೇಲೆ ಬಹುಕೋಟಿ ಹಗರಣದ ಆರೋಪ ಕೇಳಿ ಬಂದಿತ್ತು. ನಾನಾ ವಿವಾದಗಳು ಸುತ್ತಿಕೊಂಡ ಬಳಿಕ ಲಲಿತ್ ಮೋದಿ ದೇಶವನ್ನು ತೊರೆದು ಪಲಾಯನ ಮಾಡಿದ್ದರು. ಈ ಎಲ್ಲ ವಿಷಯಗಳ ಬಗ್ಗೆ ಶಮಾನಿಯ Figuring Out ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಲಲಿತ್ ನಾನು ಭಾರತ ತೊರೆದಿದ್ದು ಕಾನೂನು ಸಮಸ್ಯೆಗಳಿಂದಲ್ಲ. ಬದಲಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೀವ ಬೆದರಿಕೆ ಹಾಕಿದ ಕಾರಣಕ್ಕೇ ನಾನು ದೇಶ ಬಿಡಬೇಕಾಯಿತು ಎಂದರು.
ಇದಲ್ಲದೆ ಕೊಚ್ಚಿ ಫ್ರಾಂಚೈಸಿ ಕುರಿತಾಗಿ ಮಾತನಾಡಿರುವ ಲಲಿತ್, ಕೊಚ್ಚಿ ತಂಡದ ವಿಚಾರವಾಗಿ ಸುನಂದಾ ಶೂನ್ಯ ಬಂಡವಾಳದ ಹೊರತಾಗಿಯೂ ಶೇ.25% ರಷ್ಟು ಲಾಭಾಂಶ ಪಾಲು ಸಂಸದ ಶಶಿ ತರೂರ್ ಅವರ ದಿವಂಗತ ಪತ್ನಿ ಸುನಂದಾ ಪುಷ್ಕರ್ ಮುಂದಾಗಿದ್ದರು.
ಈ ಬಗ್ಗೆ ಪ್ರಶ್ನಿಸಿದಾಗ ನನಗೆ ಶಶಿ ತರೂರ್ ಹಾಗೂ ದೆಹಲಿಯ 10 ಜನಪಥ್ ಶಕ್ತಿಕೇಂದ್ರದಿಂದ ಐಟಿ, ಇಡಿ ದಾಳಿ ನಡೆಸುವುದಾಗಿ ಬೆದರಿಕೆ ಕರೆಗಳು ಬರುತ್ತಿದ್ದವು. ಈ ವಿಚಾರವಾಗಿ ಆಗಿನ ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಅವರು ಕರೆ ಮಾಡಿ ಒಪ್ಪಂದಕ್ಕೆ ಸಹಿ ಹಾಕುವಂತೆ ಹೇಳಿದ್ದರು ಎಂದು ಆರೋಪಿಸಿದ್ದಾರೆ.
ಸುನಂದಾ ಪುಷ್ಕರ್ ಸಾವಿನ ಸುದ್ದಿ ಹೊರಬರುತ್ತಿದ್ದಂತೆ ಶಶಿ ತರೂರ್ ಮೊದಲು ಭೇಟಿ ಮಾಡಿದ್ದು, ಸೋನಿಯಾ ಗಾಂಧಿ ಅವರನ್ನು. ಇದು ತನಿಖಾ ಸಂಸ್ಥೆಗಳಿಗೆ ಒಂದು ಸಂದೇಶವಾಗಿತ್ತು, ಏಕೆಂದರೆ ಅವರು ಶಶಿ ತರೂರ್ ಸೋನಿಯಾ ಗಾಂಧಿ ಅವರ ಬೆಂಬಲವನ್ನು ಹೊಂದಿದ್ದರು. ನಾನು ಯಾವಾಗ ಬೇಕಾದರೂ ಭಾರತಕ್ಕೆ ಮರಳಬಹುದು ಎಂದು ಲಲಿತ್ ಮೋದಿ ಹೇಳಿದ್ದಾರೆ. ಲಲಿತ್ ಮೋದಿ ಈ ಸ್ಫೋಟಕ ಆರೋಪ ಮಾಡಿದ್ದು, ಕ್ರೀಡಾ ವಲಯದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
PublicNext
28/11/2024 04:48 pm