", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/462628-1739271327-WhatsApp-Image-2025-02-11-at-4.25.17-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಮೈಸೂರಿನ ಉದಯಗಿರಿ ಪೋಲಿಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಅತ್ಯಂತ ಅಘಾತಕಾರಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಗೃಹ ಇಲಾ...Read more" } ", "keywords": "Bengaluru, law and order, home department, suicide, Sunil Kumar, Karnataka news, Indian news, law and order news, home department news, suicide news, Bengaluru news, Karnataka government, Indian government, policy decisions, administrative measures, legislative reforms, judicial interventions, social activism, people's movement, mass mobilization, collective action, solidarity, unity, struggle, resistance, protest, agitation, demonstration, rally, march, procession, strike, boycott, picketing, satyagraha, non-violent resistance, civil disobedience, peaceful protest, democratic protest,,Bangalore,Bangalore-Rural,Politics", "url": "https://publicnext.com/node" }
ಬೆಂಗಳೂರು: ಮೈಸೂರಿನ ಉದಯಗಿರಿ ಪೋಲಿಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಅತ್ಯಂತ ಅಘಾತಕಾರಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಗೃಹ ಇಲಾಖೆ ಆತ್ಮಹತ್ಯೆ ಮಾಡ್ಕೊಳ್ಳೋದು ಸೂಕ್ತ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.
ಈ ಕುರಿತಂತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೈಸೂರಂತಹ ನಗರದಲ್ಲಿ ಏಕಾಏಕಿ ಪೊಲೀಸರ ಮೇಲೆ ಕಲ್ಲು ತೂರಾಟ ಆಗುತ್ತದೆ. ಸಿಎಂ ಸ್ವ ಕ್ಷೇತ್ರದಲ್ಲಿ 14ಕ್ಕೂ ಹೆಚ್ಚು ಪೊಲೀಸರಿಗೆ ಗಾಯ ಆಗುತ್ತೆ ಅಂದ್ರೆ ಗೃಹ ಇಲಾಖೆಗೆ ಆತ್ಮಹತ್ಯೆ ಮಾಡಿಕೊಳ್ಳದೇ ಬೇರೆ ದಾರಿ ಇಲ್ಲ. ಕೆ.ಜೆಹಳ್ಳಿ ಘಟನೆ ಆದಾಗ ಬಿಜೆಪಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ತಗೆದುಕೊಂಡಿತ್ತು ಇವರ ಮೇಲಿನ ಕೇಸನ್ನು ಕಾಂಗ್ರೆಸ್ ವಾಪಸ್ ತಗೆದುಕೊಂಡಿತ್ತು, ಇದ್ರಿಂದ ನಾವು ಪೊಲೀಸ್ ಠಾಣೆ ಮೇಲೆ ದಾಳಿಮಾಡಬಹುದು ಎಂಬ ಪ್ರೇರಣೆ ಆ ಸಮುದಾಯದಕ್ಕೆ ಆವತ್ತೆ ಸಿಕ್ಕಿತ್ತು. ಗೃಹ ಇಲಾಖೆ ಪುಂಡ ಪೋಕರಿಗಳ ಮೇಲೆ ಕ್ರಮಕ್ಕೆ ಹಿಂಜರಿಯುತ್ತಿದೆ, ಕೇವಲ ವಿರೋಧ ಪಕ್ಷವನ್ನು ಟಾರ್ಗೆಟ್ ಮಾಡಲು ರಾಜ್ಯ ಸರ್ಕಾರ ಗೃಹ ಇಲಾಖೆಯನ್ನು ಬಳಸುತ್ತಿದೆ, ರಾಜ್ಯದಲ್ಲಿ ಅವೊತ್ತಿನ ಕಾಂಗ್ರೆಸ್ ಕಾಲದ ಕಾಶ್ಮೀರದ ಸ್ಥಿತಿ ಯಾವ ರೀತಿ ಇದೆಯೋ ಆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಇನ್ನೂ ಸಿಎಂ ರೂಮ್ ಬಿಟ್ಟು ಹೊರಗೆ ಬರ್ತಿಲ್ಲ,ಗೃಹ ಸಚಿವರು ನಾನು ಯಾವಾಗ ಸಿಎಂ ಆಗಬೇಕು ಎಂಬ ಆಲೋಚನೆಯಲ್ಲಿದ್ದಾರೆ. ಇಡೀ ಕಾನೂನು ಸುವ್ಯವಸ್ಥೆ ಹಾಳಾಗಿದೆ, ಸರ್ಕಾರ ತಕ್ಷಣ ಮಂಪರು ನಿದ್ದೆಯಿಂದ ಹೊರಗಬರಬೇಕು ಎಂದು ಟೀಕಿಸಿದರು.
PublicNext
11/02/2025 04:26 pm