", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/387839-1739238641-WhatsApp-Image-2025-02-10-at-8.16.15-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಶುರುವಾಗಲು ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಐಪಿಎಲ್ ಆರಂಭವಾಗಲ...Read more" } ", "keywords": "RCB, Champions Trophy, Star Players, Cricket, Indian Premier League, IPL, Royal Challengers Bangalore, T20 Cricket, Big Blow to RCB. ,,Sports", "url": "https://publicnext.com/node" }
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಶುರುವಾಗಲು ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಐಪಿಎಲ್ ಆರಂಭವಾಗಲಿದೆ. ಈ ಹೊತ್ತಲ್ಲೆ ಮೆಗಾ ಟೂರ್ನಿಯಿಂದ ಆರ್‌ಸಿಬಿಯ ಇಬ್ಬರು ಸ್ಟಾರ್ ಆಟಗಾರರು ಹೊರಬಿದ್ದಿದ್ದಾರೆ. ಹೀಗಾಗಿ ಇವರು ಮುಂದಿನ ಐಪಿಎಲ್ ಆಡೋದು ಡೌಟ್ ಎಂದು ಹೇಳಲಾಗ್ತಿದೆ.
ಇತ್ತೀಚೆಗೆ ನಡೆದ ಮೆಗಾ IPL ಹರಾಜಿನಲ್ಲಿ RCB ಆಸ್ಟ್ರೇಲಿಯಾ ತಂಡದ ಸ್ಟಾರ್ ವೇಗಿ ಜೋಶ್ ಹ್ಯಾಝಲ್ವುಡ್ ಅವರನ್ನು ಖರೀದಿ ಮಾಡಿದ್ರು. ಆದರೆ ಹ್ಯಾಝಲ್ವುಡ್ ಕಾಲು ನೋವಿನಿಂದ ಬಳಲುತ್ತಿದ್ದು, ಚಾಂಪಿಯನ್ಸ್ ಟ್ರೋಫಿ ಆಡೋದು ಡೌಟ್ ಆಗಿದೆ. ಐಪಿಎಲ್ ವೇಳೆಗೆ ಫಿಟ್ ಆಗೋದು ಕೂಡ ಡೌಟ್ ಇದ್ದು, ಇದು ಆರ್ಸಿಬಿ ತಂಡಕ್ಕೆ ಆಘಾತ ತಂದಿದೆ.
ಇಂಗ್ಲೆಂಡ್‌ನ ಯುವ ಆಲ್ರೌಂಡರ್ ಜೇಕಬ್ ಬೆಥೆಲ್. ಇವರನ್ನು ಆರ್ಸಿಬಿ ತಂಡ ಮೆಗಾ ಹರಾಜಿನಲ್ಲಿ ಖರೀದಿ ಮಾಡಿತ್ತು. ಬೆಥೆಲ್ ಈಗ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದ್ದಾರೆ. ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿರೋ ಇವರು ಐಪಿಎಲ್ನಲ್ಲಿ ಭಾಗಿಯಾಗುವುದು ಡೌಟ್ ಆಗಿದೆ.
ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿರೋ ಈ ಇಬ್ಬರು ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಲಿದ್ದಾರಾ? ಅನ್ನೋ ಚರ್ಚೆ ಶುರುವಾಗಿದೆ.
PublicNext
11/02/2025 07:20 am