", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/235762-1739197646-WhatsApp-Image-2025-02-10-at-7.13.51-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivaniBangalore" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ನಾಗರಿಕರು ನೀಡಿರುವ ಸಲಹೆಗಳ ಪೈಕಿ ಕಾನೂನಲ್ಲಿ ಅವಕಾಶವಿರುವ ಅಂಶಗಳನ್ನು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದಲ್ಲಿ ಅಳವಡಿಸಿಕೊಳ್ಳಲ...Read more" } ", "keywords": "Greater Bangalore Governance Bill, Karnataka urban governance, Bangalore city administration, BBMP administration, urban development Karnataka, Bangalore civic amenities, Greater Bangalore municipal corporation, Karnataka government policies, Bangalore infrastructure development. ,Bangalore,Bangalore-Rural,Infrastructure,Government", "url": "https://publicnext.com/node" } ಕಾನೂನಲ್ಲಿ ಅವಕಾಶವಿರುವ ಅಂಶಗಳನ್ನು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದಲ್ಲಿ ಅಳವಡಿಸಿಕೊಳ್ಳಲಾಗುವುದು - ರಿಜ್ವಾನ್ ಹರ್ಷದ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾನೂನಲ್ಲಿ ಅವಕಾಶವಿರುವ ಅಂಶಗಳನ್ನು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದಲ್ಲಿ ಅಳವಡಿಸಿಕೊಳ್ಳಲಾಗುವುದು - ರಿಜ್ವಾನ್ ಹರ್ಷದ್

ಬೆಂಗಳೂರು: ನಾಗರಿಕರು ನೀಡಿರುವ ಸಲಹೆಗಳ ಪೈಕಿ ಕಾನೂನಲ್ಲಿ ಅವಕಾಶವಿರುವ ಅಂಶಗಳನ್ನು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ರಿಜ್ವಾನ್ ಹರ್ಷದ್ ಅವರು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯ ಪೂರ್ವದಲ್ಲಿ ಬಂಜಾರ ಭವಮ ಹಾಗೂ ಮಹದೇವಪುರ ವಲಯದಲ್ಲಿ ನ್ಯೂ ಹೊರೈಝನ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಇಂದು ಸಾರ್ವಜನಿಕರಿಂದ ಸಲಹೆ ಮತ್ತು ಅಭಿಪ್ರಾಯ ಸ್ವೀಕರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಬೆಂಗಳೂರ ನಗರದ ಆಡಳಿತ ವ್ಯವಸ್ಥೆಯ ಕುರಿತು ಪ್ರತಿಯೊಬ್ಬ ಪ್ರಜೆಗೂ ಒಳ್ಳೆಯ ಕಾಳಜಿಯಿದೆ. ಬೆಂಗಳೂರು ದೇಶ ಹಾಗೂ ವಿಶ್ವದಲ್ಲಿಯೇ ಹೆಸರಾಗಿರುವ ನಗರವಾಗಿ ಬೆಳದಿದೆ. ಈ ನಗರದ ಆಡಳಿತ ಉತ್ತಮ ಮಟ್ಟದಲ್ಲಿರಬೇಕು. ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳು ಸುಲಭವಾಗಿ ಸಿಗುವಂತಾಗೇಕೆಂದು ಎಂದು ಹೇಳಿದರು.

ನಗರಲ್ಲಿ ಮೂಲಸೌಕರ್ಯ, ಭವಿಷ್ಯದ ಕಾರ್ಯಕ್ರಮಗಳಲ್ಲಿ ರೋಬೋ ವ್ಯವಸ್ಥೆ ತಯಾರಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಗೇಟ್ರರ್ ಬೆಂಗಳೂರು ಆಡಳಿತ ವಿಧೇಯಕದ ಕಡರನ್ಮು ತಂದಿದ್ದು, ಇದರ ಸಾಧಕ-ಭಾದಕಗಳ ಪರಿಶೀಲನೆಗಾಗಿ ಜಂಟಿ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಈಗಾಗಲೇ 18 ಸಭೆಗಳನ್ನು ಮಾಡಿ ಹಲವಾರು ವಿಷಯಗಳನ್ನು ಕೂಲಂಕುಷವಾಗಿ ಚರ್ಚಿಸಲಾಗಿದೆ. ಎಲ್ಲಾ ವಿಷಯಗಳನ್ನು ಬಹು ಆಯಾಮಗಳಲ್ಲಿ ಚರ್ಚಿಸಿ ವಿಧೇಯಕವನ್ನು ಸಿದ್ದಪಡಿಸಲಾಗುತ್ತಿದೆ ಎಂದು ಹೇಳಿದರು.

ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಸಂಚಾರ ದಟ್ಟಣೆಯು ಬೇರೆ-ಬೇರೆ ಇಲಾಖೆಗಳಡಿ ಕಾರ್ಯನಿರ್ವಹಿಸುತ್ತಿರುವ ಕಾರಣ ರಸ್ತೆಗಳು ಸರಿಪಡಿಸಿದ ಕೆಲ ದಿನಗಳಲ್ಲಿಯೇ ಅಗೆದು ಬಿಡುತ್ತಾರೆ. ಇಲಾಖೆಗಳ ನಡುವೆ ಸಮನ್ವಯತೆಯಿಲ್ಲದ ಕಾರಣ ನಗರದಲ್ಲಿ ಸಾಕಷ್ಟು ಸಮಸ್ಯೆಗಳು ದಿನೇ ದಿನೆ ಉದ್ಬವಿಸುತ್ತಿವೆ. ನಗರದಲ್ಲಿರುವ ಸಮಸ್ಯೆಗಳನ್ನು ಒಂದೇ ಸ್ಥಳದಲ್ಲಿ ಚರ್ಚಿಸುವ ವೇದಿಕೆಯಿಲ್ಲದಿದ್ದರೆ ಸಾರ್ವಜನಿಕರ ತೆರಿಗೆ ಹಣವೆಲ್ಲಾ ವ್ಯರ್ಥವಾಗುತ್ತದೆ. ಆದ್ದರಿಂದ ಇದಕ್ಕೆ ನೀವುಗಳು ಉತ್ತಮ ಸಲಹೆಗಳನ್ನು ನೀಡಬೇಕೆಂದು ಹೇಳಿದರು.

ಈ ವೇಳೆ ಮಾನ್ಯ ಶಾಸಕರು ಹಾಗೂ ಸಮಿತಿಯ ಸದಸ್ಯರಾದ ಎಸ್.ಟಿ ಸೋಮಶೇಖರ್, ಎ.ಸಿ ಶ್ರೀನಿವಾಸ್, ಪ್ರಿಯಕೃಷ್ಣ, ಕೆ.ಆರ್ ಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಭೈರತಿ ಬಸವರಾಜ್, ವಿಧಾನಪರಿಷತ್ತಿನ ಸದಸ್ಯರಾದ ನಾಗರಾಜ್ ಯಾದವ್, ವಲಯ ಆಯುಕ್ತರಾದ ಸ್ನೇಹಲ್, ರಮೇಶ್, ಜಂಟಿ ಆಯುಕ್ತರಾದ ಸರೊಜಾ, ಡಾ. ಕೆ. ದಾಕ್ಷಾಯಿಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Edited By : Nagaraj Tulugeri
PublicNext

PublicNext

10/02/2025 07:58 pm

Cinque Terre

11.61 K

Cinque Terre

0