", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/235762-1739027011-WhatsApp-Image-2025-02-08-at-6.20.02-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ದೆಹಲಿ ಚುನಾವಣೆಯಲ್ಲಿ ರಾಷ್ಟ್ರೀಯತೆಯಲ್ಲಿ ನಂಬಿಕೆ ಇರುವ ಅಲ್ಪಸಂಖ್ಯಾತರು ಬಿಜೆಪಿ ಕೈ ಹಿಡಿದಿದ್ದಾರೆ ಎಂದು ಸಂಸದ ಬಸವರಾಜ್ ಬೊಮ್ಮ...Read more" } ", "keywords": "Delhi election results, BJP Muslim supporters, nationalism, Indian politics, election analysis, Delhi assembly elections, BJP performance, Muslim vote bank, political trends, Bommai statement. ,Bangalore,Bangalore-Rural,Politics", "url": "https://publicnext.com/node" }
ಬೆಂಗಳೂರು: ದೆಹಲಿ ಚುನಾವಣೆಯಲ್ಲಿ ರಾಷ್ಟ್ರೀಯತೆಯಲ್ಲಿ ನಂಬಿಕೆ ಇರುವ ಅಲ್ಪಸಂಖ್ಯಾತರು ಬಿಜೆಪಿ ಕೈ ಹಿಡಿದಿದ್ದಾರೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ದೆಹಲಿ ಚುನಾವಣಾ ಫಲಿತಾಂಶ ಕುರಿತು ಮಾತನಾಡಿದ ಅವರು, ದೆಹಲಿಯಲ್ಲಿ 30 ವರ್ಷದ ನಂತರ ಬಿಜೆಪಿ ಅಧಿಕಾರಕ್ಕೆ ಬಂದಿದೆ, ಅಣ್ಣಾ ಹಜಾರೆ ನೇತೃತ್ವಕ್ಕೆ ಭ್ರಷ್ಟಾಚಾರ ವಿರುದ್ಧ ಬೆಂಬಲ ಕೊಡೋ ಮೂಲಕ ಆಪ್ ಗೆ ಬೆಂಬಲ ಕೊಟ್ಟಿದ್ರು ಆದ್ರೆ ಆಪ್ ಭ್ರಷ್ಟಾಚಾರದಲ್ಲಿ ಮುಳುಗಿತ್ತು ಎಂದು ಆರೋಪಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಮೋದಿ ಕಾರ್ಯಕ್ರಮಗಳಿಗೆ ಜನ ಸ್ಪಷ್ಟ ಬೆಂಬಲ ಕೊಟ್ಟಿದ್ದಾರೆ. ಆಪ್ ಆಂದೋಲನ ಮೂಲಕ ದೊಡ್ಡ ವಿಶ್ವಾಸ ಹುಟ್ಟಿಸಿತ್ತು ಆಗ ಆದ್ರೆ ಸುಳ್ಳು, ಭ್ರಷ್ಟಾಚಾರದಲ್ಲಿ ಅವ್ರು ಮುಳುಗಿದ್ರು ಅವರ ದುರಾಡಳಿತಕ್ಕೆ ಜನ ಬೇಸತ್ತಿದ್ದರು. ದೆಹಲಿಯಲ್ಲಿ ಮೂಲ ಸೌಕರ್ಯ ಹಳ್ಳ ಹಿಡಿದಿತ್ತು ಎಂದರು.
ನನ್ನ ಪ್ರಕಾರ ಬಡವರು, ಮಧ್ಯಮ ವರ್ಗ, ವ್ಯಾಪಾರಸ್ಥರು, ರೈತರು,ಗ್ರಾಮೀಣ ಜನ, ಹರಿಯಾಣದ ಜಾಟರು, ಸಿಖ್, ಪಂಜಾಬಿ ಮಾತಾಡೊರು, ಯುಪಿ, ಬಿಹಾರದ ವಲಸೆಗಾರರು ಬಿಜೆಪಿ ಕೈ ಹಿಡಿದ್ದಾರೆ, ದೊಡ್ಡ ಬೆಂಬಲ ಕೊಟ್ಟಿದ್ದಾರೆ ಅಲ್ದೇ ರಾಷ್ಟ್ರಿಯತೆಯಲ್ಲಿ ನಂಬಿಕೆ ಇರೋ ಅಲ್ಪಸಂಖ್ಯಾತರೂ ಸಹ ಬಿಜೆಪಿ ಕೈ ಹಿಡಿದಿದ್ದಾರೆ.
ಈ ಚುನಾವಣೆ ಒಟ್ಟು ಪರಿಣಾಮ ಬಿಜೆಪಿ ಶಕ್ತಿಶಾಲಿ ಆ ಭಾಗದಲ್ಲಿ ಆಗಿದೆ, ಇನ್ನೊಂದು ಕಡೆ ಇಂಡಿ ಕೂಟದಲ್ಲಿ ಇನ್ನಷ್ಟು ಗೊಂದಲ ಸೃಷ್ಟಿಯಾಗಲಿದೆ ಇಂಡಿ ಕೂಟದಲ್ಲಿ ನಾಯಕತ್ವ ಗೊಂದಲ ಇನ್ನಷ್ಟು ಹೆಚ್ಚಾಗುತ್ತೆ ಎಂದು ಭವಿಷ್ಯ ನುಡಿದರು.
Kshetra Samachara
08/02/2025 08:34 pm