ಬೆಳ್ತಂಗಡಿ : ಕಾರು ಅಪಘಾತಕ್ಕೀಡಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ಸಮೀಪದ ದಿಡುಪೆ ಬಳಿ ನಡೆದಿದೆ
ಕುಕ್ಕಾವು ನಿವಾಸಿ ಪುತ್ತಾಕ (ಇಬ್ರಾಹೀಂ ) (67) ಮೃತಪಟ್ಟವರು. ಮೃತರು ಕಾರಿನಲ್ಲಿ ದಿಡುಪೆಗೆ ಹೋಗಿದ್ದು ಕಾರಿನಿಂದ ಇಳಿದು ಮುಂದಕ್ಕೆ ತೆರಳುತ್ತಿದ್ದಂತೆ ನಿಲ್ಲಿಸಿದ್ದ ಕಾರು ಹಠಾತ್ತನೆ ಮುಂದಕ್ಕೆ ಚಲಿಸಿ ಪುತ್ತಾಕ ಅವರಿಗೆ ಢಿಕ್ಕಿ ಹೊಡೆದಿದೆ.
ಹಕೀಂ ಎಂಬವರು ವಾಹನ ಚಲಾಯಿಸುತ್ತಿದ್ದರೆಂದು ತಿಳಿದು ಬಂದಿದ್ದು, ಅವರ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪುತ್ತಾಕರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
Kshetra Samachara
07/02/2025 04:59 pm