ನಾಗ್ಪುರ್ : ಇಂದು ನಾಗ್ಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಟೀಮ್ ಇಂಡಿಯಾಗೆ 249 ರನ್ಗಳ ಗುರಿ ನೀಡಿತ್ತು.
ಇಂಗ್ಲೆಂಡ್ ನೀಡಿದ 249 ರನ್ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಓಪನಿಂದ ಮಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು.
ಕ್ರೀಸ್ನಲ್ಲಿ ಕೊನೆಯವರೆಗೂ ನಿಂತು ಆಡಿದ ಶುಭ್ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ತಾನು ಆಡಿದ 96 ಬಾಲ್ನಲ್ಲಿ ಬರೋಬ್ಬರಿ 14 ಫೋರ್ ಸಮೇತ 87 ರನ್ ಚಚ್ಚಿದ್ರು.
ಶ್ರೇಯಸ್ ಅಯ್ಯರ್ ತಮ್ಮ ಹಳೆಯ ಸ್ವರೂಪಕ್ಕೆ ಮರಳಿದ್ದಾರೆ. ಎಂದಿನಂತೆ ತಮ್ಮ ಅದ್ಭುತ ಆಟ ಪ್ರದರ್ಶಿಸಿದ ಇವರು ಇಂಗ್ಲೆಂಡ್ ತಂಡದ ಬೌಲರ್ಗಳನ್ನು ಕಾಡಿದರು.
PublicNext
06/02/2025 08:49 pm