ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾವಿನಂಚಿನ ರೋಗಿಗಳಿಗೆ ಸುಖ ಮರಣಕ್ಕೆ ಸಮ್ಮತಿ

ಬೆಂಗಳೂರು: ಮಾರಣಾಂತಿಕ ರೋಗದಿಂದ ಬಳಲುತ್ತಿರುವವರಿಗೆ ಸ್ವಇಚ್ಛೆಯಂತೆ ದಯಾ ಮರಣದ ಅವಕಾಶವನ್ನ ಕಲ್ಪಿಸಿ

ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಇಲಾಖೆಯು ಈ ಕ್ರಮ ಕೈಗೊಂಡಿದೆ. ಸಂವಿಧಾನದ 21ನೇ ವಿಧಿಯು ಘನತೆಯಿಂದ ಬದುಕುವ ಹಾಗೂ ಸಾಯುವ ಹಕ್ಕನ್ನು ಒದಗಿಸಿದೆ.

ಇನ್ನೂ, ಸುಖಮರಣವನ್ನು ಜಾರಿಗೊಳಿಸುವ ಮುನ್ನ ಕುಟುಂಬಸ್ಥರ ಒಪ್ಪಿಗೆಯ ಬಳಿಕ ವೈದ್ಯರ ತಂಡವು ಘನತೆಯ ಸಾವಿನ ಹಕ್ಕನ್ನು ಪರಿಶೀಲಿಸಲಿದೆ. ಇದಕ್ಕಾಗಿ ತಲಾ ಮೂವರು ನೋಂದಾಯಿತ ವೈದ್ಯರನ್ನು ಹೊಂದಿರುವ ಪ್ರಾಥಮಿಕ ಹಾಗೂ ಸೆಕೆಂಡರಿ ಎಂಬ ಎರಡು ವೈದ್ಯರ ಮಂಡಳಿಯನ್ನು ರೋಗಿಯು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಸ್ಥಾಪಿಸಬೇಕು. ಸೆಕೆಂಡರಿ ವೈದ್ಯಕೀಯ ಮಂಡಳಿಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಯಿಂದ ನಾಮನಿರ್ದೇಶನಗೊಂಡ ನೋಂದಾಯಿತ ವೈದ್ಯಕೀಯ ವೃತ್ತಿಪರರಿರಬೇಕು.

ನ್ಯೂರಾಲಾಜಿಸ್ಟ್‌, ನ್ಯೂರೋಸರ್ಜನ್‌, ಸರ್ಜನ್‌, ಅರವಳಿಕೆ ತಜ್ಞ, ಇಂಟೆನ್ಸಿವಿಸ್ಟ್‌ ಹೀಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದ ತಜ್ಞರೊಬ್ಬರು ಸೆಕೆಂಡರಿ ವೈದ್ಯಕೀಯ ಮಂಡಳಿಯಲ್ಲಿ ಇರಬೇಕು ಎಂದು ಸೂಚಿಸಲಾಗಿದೆ. ಇದರಿಂದಾಗಿ ರೋಗಿ ಹಾಗೂ ರೋಗಿಯ ಕುಟುಂಬ ಮಾನಸಿಕವಾಗಿ ಕುಗ್ಗುವುದರಿಂದ ನಿರಾಳವಾಗುವ ಸಾಧ್ಯತೆ ಇದೆ ಅಂತ ಮನಶ್ಶಾಸ್ತ್ರಜ್ಞರೂ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Edited By : Vinayak Patil
PublicNext

PublicNext

02/02/2025 05:43 pm

Cinque Terre

51.02 K

Cinque Terre

0

ಸಂಬಂಧಿತ ಸುದ್ದಿ