ಅರಸೀಕೆರೆ: ಟಿವಿಎಸ್ ಮೊಪೆಡ್‌ಗೆ ಕಾರು ಡಿಕ್ಕಿಯಾಗಿ ಮಾವ, ಸೊಸೆ ಸ್ಥಳದಲ್ಲೇ ಸಾವಿಗೀಡಾದ ಘಟನೆ ಅರಸೀಕೆರೆ ತಾಲ್ಲೂಕಿನ ಯಾದಪುರ ಬೈಪಾಸ್‌ನಲ್ಲಿ ನಡೆದಿದೆ.
ಟಿವಿಎಸ್ ಮೊಪೆಡ್ ಸವಾರ ಮುರುಂಡಿಯ ಗಂಗಾಧರ ನಾಯಕ (50) ಹಾಗೂ ಪ್ರಿಯ (20) ಮೃತ ದುರ್ದೈವಿಗಳು. ಬೆಂಗಳೂರು ಕಡೆಯಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ KA-37 N-8495 ನಂಬರ್‌ನ ಟಾಟಾ ನೆಕ್ಸಾನ್ ಕಾರು, ಅರಸೀಕೆರೆಯಿಂದ ಮುರುಂಡಿ ಕಡೆಗೆ ತೆರಳುತ್ತಿದ್ದ ಮಾವ, ಸೊಸೆ ಅವರಿದ್ದ ಮಾಡುತ್ತಿದ್ದ ಟಿವಿಎಸ್ ಮೊಪೆಡ್‌ಗೆ ತಿರುವಿನಲ್ಲಿ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಇಬ್ಬರೂ ದಾರುಣವಾಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರಪೊಲೀಸರು ಭೇಟಿ ನೀಡಿ ವಾಹನಗಳನ್ನು ವಶಕ್ಕೆ ಪಡೆದು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
PublicNext
02/02/2025 11:03 am