ಡೊನಾಲ್ಡ್ ಟ್ರಂಪ್ ಸರ್ಕಾರದಲ್ಲಿ ಭಾರತೀಯ ಮೂಲದ ಕಾಶ್ ಪಟೇಲ್ ಅವರನ್ನು FBI ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಸದ್ಯ ಎಫ್‌ಬಿಐ ಮುಖ್ಯಸ್ಥ ಕಾಶ್ ಪಟೇಲ್ ಅವರು ಸೆನಟ್‌ನಲ್ಲಿ ಜೈ ಶ್ರೀ ಕೃಷ್ಣ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗುರುವಾರ ಸೆನೆಟ್ ದೃಢೀಕರಣ ವಿಚಾರಣೆಯ ಸಂದರ್ಭದಲ್ಲಿ ತಮ್ಮ ಕುಟುಂಬವನ್ನು ಪರಿಚಯಿಸುವಾಗ ಅವರು ದೇವರನ್ನು ಸ್ಮರಿಸಿದ್ದಾರೆ.
ಅಮೆರಿಕದಲ್ಲಿ ಟ್ರಂಪ್ ಯುಗ ಶುರುವಾಗುತ್ತಿದ್ದಂತೆ ಆಡಳಿತದಲ್ಲಿ ಭಾರತೀಯರಿಗೆ ವಿಶೇಷ ಸ್ಥಾನ ಮಾನ ದೊರಕಿದೆ. ಭಾರತೀಯ ಮೂಲದ ‘ಕಾಶ್’ ಪಟೇಲ್ ಅವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ನ ಮುಖ್ಯಸ್ಥರಾಗಿ ಟ್ರಂಪ್ ಘೋಷಣೆ ಮಾಡಿದ್ದರು.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಕಾಶ್ ಪಟೇಲ್ ಅವರು ತಮ್ಮ ಹೆತ್ತವರ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಾರೆ. ಗುಜರಾತ್ ಮೂಲದವರಾದ ಅವರು ಮಾತನಾಡಿ ಇಂದು ಇಲ್ಲಿ ಕುಳಿತಿರುವ ನನ್ನ ತಂದೆ ಮತ್ತು ನನ್ನ ತಾಯಿ ಅಂಜನಾ ಅವರನ್ನು ಸ್ವಾಗತಿಸಲು ನಾನು ಇಷ್ಟಪಡುತ್ತೇನೆ. ಅವರು ಈ ಕಾರ್ಯಕ್ರಮಕ್ಕಾಗಿಯೇ ಭಾರತದಿಂದ ಅಮೆರಿಕಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ. ನಂತರ ತನ್ನ ಸಹೋದರಿ ನಿಶಾಳ ಬಗ್ಗೆಯೂ ಉಲ್ಲೇಖಿಸಿ ಅವರೂ ಕೂಡ ನಮ್ಮೊಟ್ಟಿಗಿದ್ದಾರೆ ಎಂದು ಹೇಳಿದ್ದಾರೆ ಎಂದು ಹೇಳುತ್ತಾ ಜೈ ಕೃಷ್ಣ ಎಂದು ಹೇಳಿದ್ದಾರೆ.
ಮಾತುನ್ನು ಮುಂದುವರಿಸಿದ ಕಾಶ್ ಪಟೇಲ್ ನಾನು ನನ್ನ ಪೋಷಕರ ಕನಸು ಮಾತ್ರವಲ್ಲ, ನ್ಯಾಯ ಮತ್ತು ಕಾನೂನ್ನು ನಂಬುವ ಲಕ್ಷಾಂತರ ಅಮೆರಿಕನ್ನರ ಆಕಾಂಕ್ಷೆಗಳನ್ನು ಒತ್ತಿ ಹೇಳಿದ್ದಾರೆ. ಎಫ್‌ಬಿಐ ನಿರ್ದೇಶಕರ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದಕ್ಕೆ ಟ್ರಂಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
1980 ರಲ್ಲಿ ನ್ಯೂಯಾರ್ಕ್‌ನಲ್ಲಿ ಜನಿಸಿದ ಕಾಶ್ ಪಟೇಲ್ ಪೂರ್ವ ಆಫ್ರಿಕಾದಲ್ಲಿ ಬೆಳೆದರು. ಅವರು ಲಾಂಗ್ ಐಲ್ಯಾಂಡ್‌ನ ಗಾರ್ಡನ್ ಸಿಟಿ ಹೈಸ್ಕೂಲ್‌ನಿಂದ ಪದವಿ ಪಡೆದಿದ್ದಾರೆ. ಲಂಡನ್‌ನಲ್ಲಿ ತಮ್ಮ ಕಾನೂನು ಪದವಿಯನ್ನು ಪೂರ್ಣಗೊಳಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮತ್ತು ಹೌಸ್ ಪರ್ಮನೆಂಟ್ ಸೆಲೆಕ್ಟ್ ಕಮಿಟಿ ಆನ್ ಇಂಟೆಲಿಜೆನ್ಸ್ ಯ ಹಿರಿಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ ಅನುಭವನ್ನು ಹೊಂದಿದ್ದಾರೆ. 2019 ರಲ್ಲಿ ಟ್ರಂಪ್ ಆಡಳಿತದಲ್ಲಿಯೂ ಕೂಡ ಸೇವೆ ಸಲ್ಲಿಸಿದ್ದಾರೆ.
PublicNext
01/02/2025 07:02 pm