ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Budget 2025: ಬೀದಿಬದಿ ವ್ಯಾಪರಿಗಳು, ಅನ್ನದಾತರಿಗೆ ಗುಡ್‌ ನ್ಯೂಸ್‌

ನವದೆಹಲಿ: ಕೇಂದ್ರ ಬಜೆಟ್ ಮಂಡನೆ ಆರಂಭವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 8ನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಮೂಲಕ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಮುಂದಿನ ಐದು ವರ್ಷಗಳನ್ನು 'ಸಬ್ಕಾ ವಿಕಾಸ್' ಅನ್ನು ಸಾಕಾರಗೊಳಿಸುವ ಒಂದು ಅನನ್ಯ ಅವಕಾಶವೆಂದು ನಾವು ಪರಿಗಣಿಸಿದ್ದೇವೆ. ಇದು ಎಲ್ಲಾ ಪ್ರದೇಶಗಳ ಸಮತೋಲಿತ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮೋದಿ ಸರ್ಕಾರ 3.0 ರ ಮೊದಲ ಪೂರ್ಣ ಬಜೆಟ್-2025ರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೆಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಇದರಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಬಿಗ್‌ ರಿಲೀಫ್ ಕೊಟ್ಟಿದೆ. ಬೀದಿ ಬದಿ ವ್ಯಾಪರಿಗಳಿಗೆ ಯುಪಿಐ ಲಿಂಕ್ ಆಗಿರುವ ಕ್ರೆಡಿಟ್ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಆಧಾರದ ಮೇಲೆ 30,000 ರೂಪಾಯಿಗಳ ಮಿತಿ ಮತ್ತು ಸಾಮರ್ಥ್ಯ ವೃದ್ಧಿ ಬೆಂಬಲದೊಂದಿಗೆ UPI-ಸಂಯೋಜಿತ ಕ್ರೆಡಿಟ್ ಕಾರ್ಡ್‌ಗಳಿಂದ ಬ್ಯಾಂಕ್‌ಗಳಿಂದ ವರ್ಧಿತ ಸಾಲಗಳೊಂದಿಗೆ ಯೋಜನೆಯನ್ನು ನವೀಕರಿಸಲಾಗುತ್ತದೆ" ಎಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆಯಲ್ಲಿ ತಿಳಿಸಿದ್ದಾರೆ.

PM ಬೀದಿ ವ್ಯಾಪಾರಿಗಳ ಸ್ವನಿಧಿ, ಬೀದಿ ವ್ಯಾಪಾರಿಗಳಿಗೆ ಕೈಗೆಟುಕುವ ಸಾಲಗಳನ್ನು ಒದಗಿಸುವ ವಿಶೇಷ ಮೈಕ್ರೋ-ಕ್ರೆಡಿಟ್ ಸೌಲಭ್ಯವಾಗಿದೆ. 'ಭಾರತದಲ್ಲಿ ಸುಮಾರು 7.5 ಕೋಟಿ ಮಂದಿಗೆ ಮಧ್ಯಮ ವರ್ಗದ ಕೈಗಾರಿಗಳು ಉದ್ಯೋಗ ನೀಡಿವೆ. ಇವರಿಗೆ ನೆರವಾಗಲು ಸಣ್ಣ ಹಾಗೂ ಅತೀ ಸೂಕ್ಷ್ಮಿ ಉದ್ಯಮಗಳಿಗೆ ಸಾಲ ನೀಡಲು ಅವಕಾಶ ನೀಡಲಾಗುತ್ತದೆ. 5 ಕೋಟಿ ರೂ.ನಿಂದ 10 ಕೋಟಿ ರೂ.ವರೆಗೆ ಉದ್ಯಮ ಆರಂಭಿಸಲು ಸಾಲ ನೀಡಲಾಗುತ್ತದೆ.

ಮದ್ಯಮ ವರ್ಗಕ್ಕೆ ಬಂಪರ್ ಕೊಡುಗೆ:

ಇದೀಗ 12 ಲಕ್ಷ ರೂ.ದವರೆಗೆ ವಾರ್ಷಿಕ ಆದಾಯವಿರುವವರು ತೆರಿಗೆ ಪಾವತಿಸಬೇಕಾಗಿಲ್ಲ. ಇದರೊಂದಿಗೆ ₹75,000 ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಅನ್ವಯವಾಗುವುದರಿಂದ, ಒಟ್ಟಾರೆಯಾಗಿ ವಾರ್ಷಿಕ 12,75,000 ರೂ ಆದಾಯವಿರುವವರು ತೆರಿಗೆ ಹೊರೆಯ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹೇಳಿದರು.

ಅನ್ನದಾತರಿಗೂ ಬಜೆಟ್‌ನಲ್ಲಿ ಬಂಪರ್!

3 ಲಕ್ಷದವರೆಗೂ ಇದ್ದ ಕಿಸಾನ್‌ ಕ್ರೆಡಿಟ್ ಕಾರ್ಡ್ ಮಿತಿಯನ್ನು 5 ಲಕ್ಷದವರೆಗೂ ಹೆಚ್ಚಿಸಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರೈತರಿಗೆ ಮತ್ತಷ್ಟು ಸಾಲವನ್ನು ನೀಡುವ ದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್​ನ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಸಿಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು (ಕೆಸಿಸಿ) 7.7 ಕೋಟಿ ರೈತರು, ಮೀನುಗಾರರು ಮತ್ತು ಡೈರಿ ರೈತರಿಗೆ ಅಲ್ಪಾವಧಿಯ ಸಾಲಗಳನ್ನು ಸುಗಮಗೊಳಿಸುವುದನ್ನು ಮುಂದುವರಿಸುತ್ತದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಕೆಸಿಸಿ ಮೂಲಕ ಪಡೆಯುವ ಸಾಲದ ಸಾಲದ ಮಿತಿಯನ್ನು 3,000 ರಿಂದ 5,000 ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಹೇಳಿದರು.

12 ಲಕ್ಷದವರೆಗೂ ಟ್ಯಾಕ್ಸ್ ಇಲ್ಲ ಇಲ್ಲ!

ಮೋದಿ ಬಜೆಟ್‌ 3.0 ಹೊಸ ಟ್ಯಾಕ್ಸ್ ಲೆಕ್ಕಾಚಾರ!

0-4 ಲಕ್ಷ ರೂಪಾಯಿ ಆದಾಯ 0 %

4 ರಿಂದ 8 ಲಕ್ಷ ರೂಪಾಯಿ 5 %

8 ರಿಂದ 12 ಲಕ್ಷ ರೂಪಾಯಿ 10 %

12 ರಿಂದ 16 ಲಕ್ಷ ರೂಪಾಯಿ 15 %

16 ರಿಂದ 20 ಲಕ್ಷ ರೂಪಾಯಿ 20 %

20 ರಿಂದ 24 ಲಕ್ಷ ರೂಪಾಯಿ 25 %

24 ಲಕ್ಷಕ್ಕಿಂತ ಮೇಲ್ಪಟ್ಟ 30 %

12.75 ಲಕ್ಷದವರೆಗೂ ತೆರಿಗೆ ಇಲ್ಲ!

ಇದರೊಂದಿಗೆ 75 ಸಾವಿರ ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಅನ್ವಯವಾಗಲಿರುವುದರಿಂದ, ಒಟ್ಟು 12,75,000 ರೂಪಾಯಿವರೆಗಿನ ಆದಾಯವುಳ್ಳವರಿಗೆ ತೆರಿಗೆ ರಿಯಾಯಿತಿ ಲಭ್ಯವಾಗಲಿದೆ.ಆರಂಭದಲ್ಲಿ 2.5 ಲಕ್ಷ ಇದ್ದ ತೆರಿಗೆ ರಹಿತ ಸ್ವಾಬ್ ಅನ್ನು 2019ರಲ್ಲಿ 5 ಲಕ್ಷ ರೂಪಾಯಿಗೆ ಏರಿಸಲಾಗಿತ್ತು. 2023ರಲ್ಲಿ ತೆರಿಗೆ ರಿಯಾಯಿತಿಯ ಸ್ಪ್ಯಾಬ್ ಅನ್ನು 7 ಲಕ್ಷ ರೂಪಾಯಿಗೆ ಏರಿಕೆ ಮಾಡಿತ್ತು.

Edited By : Vijay Kumar
PublicNext

PublicNext

01/02/2025 03:45 pm

Cinque Terre

14.2 K

Cinque Terre

1